Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಎಂಟ್ರಿಯಾಗಿದ್ದು, ಹಲವೆಡೆ ಮಳೆಯಾಗುತ್ತಿದೆ. ಆರಂಭದಲ್ಲೇ ವರುಣ ಅಬ್ಬರಿಸಿದ್ದು, ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮುಂದಿನ 6 ದಿನ ರಾಜ್ಯದಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆಯಿದ್ದು, ಜೂನ್ 13ರವರೆಗೆ ಹವಾಮಾನ ಇಲಾಖೆ (IMD) ಹಲವೆಡೆ ರೆಡ್ ಅಲರ್ಟ್ ಘೋಷಿಸಿದೆ.

Out Look Fashion

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 13ರವರೆಗೆ ಬಿರುಗಾಳಿ ಸಮೇತ ಮಳೆಯಾಗಲಿದೆ ಎಂದು ತಿಳಿಸಿದೆ.

Jaya Refrigeration and Air Condition

ಬೆಳಗಾವಿ:
ಬೆಳಗಾವಿಯ (Belagavi) ವಿವಿಧ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಸವದತ್ತಿ ಹಾಗೂ ಬೈಲಹೊಂಗಲ ಪಟ್ಟಣಗಳಲ್ಲಿ ರಸ್ತೆಯಲ್ಲಿ ಮೊಳಕಾಲುದ್ದ ನೀರು ಹರಿದು ಅವಾಂತರ ಸೃಷ್ಟಿಯಾಗಿದೆ. ಮನೆಗೆ ತೆರಳಲಾಗದೇ ವಾಹನ ಸವಾರರು ಪರದಾಡಿದ್ದಾರೆ. ಮಳೆ ನೀರು ಹರಿಯುವ ರಭಸಕ್ಕೆ ಬೈಕ್‌ಗಳು ತೇಲುತ್ತಿವೆ. ಅಲ್ಲದೇ ಬೈಲಹೊಂಗಲದ ಮಾರ್ಕೆಟ್‌ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪ್ರತಿ ಬಾರಿ ಮಳೆಯಾದಾಗಲೂ ಮನೆಗೆ ಮಳೆ ನೀರು ನುಗ್ಗುತ್ತೆ ಎಂದು ಯುವಕ ಹರಿಯುವ ನೀರಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾನೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಾಲೋನಿ ಜನರು ನಗರಸಭೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆ ಸುರಿದ ಮಳೆ ನೀರು ಕೂಡ ಮನೆಗೆ ನುಗ್ಗಿದ್ದು, ಈಶ್ವರ ಶಿಲ್ಲೇದಾರ್ ಎಂಬಾತ ಹರಿಯುತ್ತಿದ್ದ ನೀರಲ್ಲಿ ವಿದ್ಯುತ್ ಕಂಬ ಹಿಡಿದು ಕುಳಿತು ಪ್ರತಿಭಟನೆ ನಡೆಸಿದ್ದಾನೆ.