Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ಹುಡುಗಿ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ (Lover) ಹೈಟೆನ್ಷನ್ ಕಂಬ (High Tension Pole) ಏರಿದ ಘಟನೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

Out Look Fashion

ಸೋಮಶೇಖರ್ ಹೈಟೆನ್ಷನ್ ಕಂಬ ಹತ್ತಿದ ಲವರ್ ಬಾಯ್. ಚಿನ್ನಯ್ಯನಪಾಳ್ಯ ನಿವಾಸಿಯಾದ ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಲವ್ ಬ್ರೇಕಪ್ ಮಾಡಿಕೊಳ್ಳಲು ಯುವತಿ ಮುಂದಾದ ಹಿನ್ನೆಲೆ ಸೋಮಶೇಖರ್ ಮನೆಯ ಶೀಟ್ ಹೊಡೆದು ದಾಂಧಲೆ ಮಾಡಿದ್ದಾನೆ. ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರೋವರೆಗೆ ಕೆಳಗೆ ಇಳಿಯುವುದಿಲ್ಲ ಎಂದಿದ್ದಾನೆ.

Jaya Refrigeration and Air Condition

ಆನೇಕಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಮನವೊಲಿಸಿದರೂ ಪಾಗಲ್ ಪ್ರೇಮಿ ಕೆಳಗಿಳಿಯಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಯುವಕನನ್ನ ಕೆಳಗಿಳಿಸಲು ಶತಪ್ರಯತ್ನ ನಡೆಸಲಾಗುತ್ತಿದೆ.