Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೈಂದೂರು: ಉಪ್ಪುಂದದ ಮೀನುಗಾರರ ಸಹಕಾರ ಸಂಘಕ್ಕೆ ಉದ್ಯೋಗಿಗಳೇ ವಂಚಿಸಿರುವ ಘಟನೆ ನಡೆದಿದೆ.ಉಪ್ಪುಂದದಲ್ಲಿರುವ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ನಾವುಂದ ನಿವಾಸಿ ಸುಭಾಶ್ಚಂದ್ರ ಮತ್ತು ಪ್ರಧಾನ ವ್ಯವಸ್ಥಾಪಕರಾಗಿದ್ದ ಮರವಂತೆ ನಿವಾಸಿ ದೀಪಕ್ ಕುಮಾರ್ ಇವರು ಸೇರಿಕೊಂಡು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು 2023-2024 ನೇ ಸಾಲಿನಲ್ಲಿ ಒಟ್ಟು 80,91,996/- ಮೊತ್ತದ ಹಣವನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸಂಘಕ್ಕೆ ಮೋಸ ಮಾಡಿ ವಂಚಿಸಿರುವುದು 2023- 2024 ರ ಸಾಲಿನ ಲೆಕ್ಕ ಪರಿಶೋಧನಾವರದಿಯಲ್ಲಿ ಸಂಘದ ಗಮನಕ್ಕೆ ಬಂದಿರುವುದಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.

Out Look Fashion

ಈ ಬಗ್ಗೆ ಮಾನ್ಯ ನ್ಯಾಯಾಲಯದ ಆದೇಶದಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2026 ಕಲಂ: 314, 316(1), 316(4), 318(1), 318(2), 318(3), 319(2), 320, 321, 322, 335, 336(1), 336(2), 336(3), 344 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Jaya Refrigeration and Air Condition