Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಹಾಸನ: ಮನೆಯ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಪುಂಡಾನೆಯೊಂದು ದಾಳಿ ಮಾಡಿ ಜಖಂಗೊಳಿಸಿದ ಘಟನೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯ ವೀಡಿಯೋ ಆಟೋ ಮಾಲೀಕನ ಮೊಬೈಲ್‍ನಲ್ಲಿ ಸೆರೆಯಾಗಿದೆ.

Out Look Fashion

ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿದೆ. ಇಂದು (ಮಾ.30) ಬೆಳಗ್ಗೆ ಮನೆಯ ಬಳಿ ಬಂದ ಒಂಟಿಸಲಗ ನಿಂತಿದ್ದ ಆಟೋ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ಆಟೋ ಜಖಂಗೊಂಡಿದೆ. ದಾಳಿ ಬಳಿಕ ಕಾಫಿ ತೋಟದೊಳಗೆ ಕಾಡಾನೆ ಓಡಿಹೋಗಿದೆ.

Jaya Refrigeration and Air Condition

ಕಳೆದ ಒಂದು ವಾರದಿಂದ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಉಳಿದುಕೊಂಡಿವೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.