



ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಗಿಲೆಟ್ ದೋಣಿಯಲ್ಲಿ ಅವಘಡ ಸಂಭವಿಸಿ, ಮೀನುಗಾರಿಕೆಗಾಗಿ ಬಳಸುತ್ತಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದಲ್ಲಿ ಮುಳುಗಿ ಹಾನಿಯಾದ ಘಟನೆ ನಡೆದಿದೆ.


IND-KA-01-MO-4902 ಕೋಟೆಪುರದಿಂದ ಕ್ಯಾಪ್ಟನ್ ಅಬ್ದುಲ್ ರೆಹಮಾನ್, ಅರುಣ್ ಹಾಗೂ ಚಾಲೋಸ್ ಅವರು ಮಾ.16ರಂದು ಮೀನುಗಾರಿಕೆಗೆ ತೆರಳಿದ್ದರು. ಅಳಿವೆ ಬಾಗಿಲಿನಿಂದ ಪಶ್ಚಿಮಕ್ಕೆ ಸುಮಾರು 8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಬಲೆ ಹಾಗೂ ಇತರ ಉಪಕರಣಗಳು ನೀರಿನಲ್ಲಿ ಮುಳುಗಿ ಕಾಣೆಯಾಗಿವೆ. ಈ ಅವಘಡದಿಂದ ಮೀನುಗಾರರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ಈ ಸಂಬಂಧ ಅಬ್ದುಲ್ ರೆಹಮಾನ್ ನೀಡಿದ ದೂರಿನ ಮೇರೆಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

