




ಮೂಡುಬಿದಿರೆ : ಮಂಗಳೂರು ಕಂಬಳದಲ್ಲಿ ಗುಣಪಾಲಕಡಂಬರಿಗೆ ಮಾಡಿದ ಅವಮಾನಕ್ಕಾಗಿ ಅರುಣ್ ಶೆಟ್ಟಿ ಮತ್ತು ಮುಚೂರು ಲೋಕೇಶ್ ಜ. 3ರಂದು ನಡೆಯುವ ಮಿಯ್ಯಾರು ಲವ ಕುಶ ಕಂಬಳದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಶುಕ್ರವಾರ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಗುಣಪಾಲ ಕಡಂಬ ಅಭಿಮಾನಿ ಬಳಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಕಂಬಳ ಸಮಿತಿ ಮತ್ತು ರಾಜ್ಯ ಕಂಬಳ ಸಮಿತಿಯಲ್ಲಿ ಪದಾಧಿಕಾರಿಯಾಗಿದ್ದುಕೊಂಡು ನಿರಂತರವಾಗಿ ಕಂಬಳದಲ್ಲಿ ಶಿಸ್ತನ್ನು ಉಲ್ಲಂಘಿಸಿರುವ ಮುಚೂರು ಲೋಕೇಶ್‌ನನ್ನು ಎರಡೂ ಸಮಿತಿಯಿಂದಲೂ ಉಚ್ಚಾಟಿಸಬೇಕು. ಈ ಎರಡು ಕಾರ್ಯಗಳನ್ನು ಜಿಲ್ಲಾ ಕಂಬಳ ಸಮಿತಿಯವರು ಮಾಡುವುದರ ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಂಬಳವನ್ನು ಇನ್ನಷ್ಟು ಪ್ರಸಿದ್ಧಿ ಆಗುವಂತೆ ಮಾಡಬೇಕು.

ಜಿಲ್ಲಾ ಕಂಬಳ ಸಮಿತಿಯಲ್ಲಿ ಕಂಬಳ ಆಯೋಜಕರು, ಕೋಣದ ಮಾಲಕರನ್ನು ಕಂಬಳ ಸಮಿತಿಯ ಶಾಶ್ವತ ಸದಸ್ಯರನ್ನಾಗಿ ಮಾಡಬೇಕು. ಈ ಎರಡು ಕಾರ್ಯಗಳನ್ನು ಜಿಲ್ಲಾ ಕಂಬಳ ಸಮಿತಿಯವರು ಮಾಡಿಸದಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಂಬಳ ಪ್ರೇಮಿಗಳು ಮುಂದಿನ ದಿನಗಳಲ್ಲಿ ಸೇರಿ ನಮ್ಮ ನಿರ್ಣಯ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಮೂಡುಬಿದ್ರೆ ಹರ್ಷವರ್ಧನ್ ಪಡಿವಾಲ್, ರಶ್ಚಿತ್ ಶೆಟ್ಟಿ ಹೊಕ್ಕಾಡಿಗೋಳಿ, ಅನಿಲ್ ಶೆಟ್ಟಿ ಜಪ್ಪು ಮಂಕುತೋಟ, ರಾಜೀವ್ ಶೆಟ್ಟಿ ಎಡೂರು, ಚಿತ್ತರಂಜನ್ ಭಂಡಾರಿ ಐಕಳ, ಸತೀಶ್ಚಂದ್ರ ಸಾಲಿಯಾನ್ ಇರುವೈಲು, ಅಶೋಕ್ ಶೆಟ್ಟಿ ಬೆಳಾಡಿಬಾವ, ಜಗದೀಶ್ ಪೂಜಾರಿ ಸಾಣೂರು, ಗಣೇಶ್ ನಾರಾಯಣ ಪಂಡಿತ್, ಸತೀಶ್ ಸಾಲ್ಯಾನ್ ಮೂಲ್ಕಿ ಪಲ್ಗೊಟ್ಟು, ಸುರೇಶ್ ಶೆಟ್ಟಿ ಹರಿ ಮೀನಾಕ್ಷಿ ತೋಟ, ಸುಬ್ರಹ್ಮಣ್ಯ ಭಟ್ ಸುರತ್ಕಲ್, ಕಾಶೀಂ ಸಾಹೇಬ್ ಬಂಗಾಡಿ, ಪ್ರಭಾಕರ ಶೆಟ್ಟಿ ಬೋರ್ಕಟ್ಟೆ ನಾಗೇಶ್ ದೇವಾಡಿಗ ಕದಂಬೈಲು ಸುರತ್ಕಲ್, ಡೊಲ್ಪಿ ಡಿಸೋಜಾ ಪದವು ಕಾನಡ್ಕ ಸುರೇಶ್ ಕೆ, ಪೂಜಾರಿ ರೆಂಜಲ ಕಾರ್ಯ, ಶ್ರೀನಿವಾಸ್ ಗೌಡ ಮಿಜಾರು ಅಶ್ವಥಪುರ, ಭರತ್ ಕುಮಾರ್ ಜೈನ್ ಕೊಳಕ್ಕೆ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಸುದೀಪ್ ಹೆಗ್ಡೆ ಶಿರ್ಲಾಲು, ಚಿರಂಜೀವಿ ಅಜೆಕಾರು, ಸತೀಶ್ ಹೊಸ್ಕಾರು ಉಪಸ್ಥಿತರಿದ್ದರು.
