




ಪುತ್ತೂರು: ಪುತ್ತೂರು ತಾಲೂಕಿನ ಉಪ್ಪಿನಂಗಡಿ ಕಜೆಕ್ಕಾರ್ ನಿವಾಸಿ ಭಾಗಿ ಎಂಬವರ ಮನೆಗೆ ಪುತ್ತೂರು ಬಿಜೆಪಿ ನಿಯೋಗ ಇಂದು ಭೇಟಿ ನೀಡಿದೆ.


ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಎಂಬಲ್ಲಿ ಭಾಗಿ ಎಂಬವರ ಮನೆ ಬೀಳುವ ಪರಿಸ್ಥಿತಿಯಲ್ಲಿದ್ದು, ಈಗ ಈ ಬಡಪಾಯಿಯ ಮನೆಗೆ ಟಾರ್ಪಲೆ ಹೊದಿಕೆ, ಟಾರ್ಪಲೆ ಗೋಡೆ, ಹಳೆ ಬ್ಯಾನರ್ ಗಳೇ ಬಾಗಿಲುಗಳಾಗಿವೆ, ಇಂತಹ ಪರಿಸ್ಥಿತಿಯಲ್ಲಿ ಭಾಗಿ ಯವರು ಜೀವನ ನಡೆಸುತ್ತಿದ್ದಾರೆ.


ಪುತ್ತೂರು ಬಿಜೆಪಿ ನಿಯೋಗ ಇಂದು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭಾಗೀಯವರಿಗೆ ದಿನ ಉಪಯೋಗಿ ಸಾಮಗ್ರಿಗಳನ್ನು ನೀಡಿ, ಬಡಪಾಯಿಯ ಕಷ್ಟಕ್ಕೆ ನೆರವಾಗಿದ್ದಾರೆ.

ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪ್ಪಿನಂಗಡಿ ವತಿಯಿಂದ 50 ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದ ಸವಿ ನೆನಪಿಗಾಗಿ ಮನೆ ನಿರ್ಮಾಣ ಮಾಡಿ ಕೊಡುವುದಾಗಿ ನಿರ್ಣಯಿಸಲಾಗಿದೆ. ಈ ಮನೆ ನಿರ್ಮಾಣದ ಕಾರ್ಯಕ್ಕೆ ಪುತ್ತೂರು ಬಿಜೆಪಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಕಲ್ಲಿಮಾರ್, ನಗರ ಮಂಡಲ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ರೈ ಕೈಕಾರ, ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ನಾಗೇಶ್ ಟಿ.ಎಸ್. ಕೆಮ್ಮಾಯಿ, ಉಪ್ಪಿನಂಗಡಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಸುರೇಶ್ ಅತ್ರಮಜಲು, ಶಕ್ತಿಕೇಂದ್ರ ಅಧ್ಯಕ್ಷ ಪ್ರಸಾದ್, ಪುತ್ತೂರು ನಗರ ಬಿಜೆಪಿಯ ನಾಗೇಂದ್ರ ಬಾಳಿಗ, ನಿತೇಶ್ ಬಲ್ನಾಡು, ಪ್ರವೀಣ್ ಕೇಪುಳು , ಉಪ್ಪಿನಂಗಡಿಯ ಜಯಂತ ಪುರೋಳಿ, ಹರೀಶ್ ಉಪಸ್ಥಿತರಿದ್ದರು.
