Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ದೀಪಾವಳಿ ಹಬ್ಬದ ಪ್ರಯುಕ್ತ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಪರವಾನಗಿ ಪಡೆಯುವ ಸಂಬಂಧ ಹಲವಾರು ವ್ಯಾಪಾರಸ್ಥರು ಅರ್ಜಿ ಸಲ್ಲಿಸಿದ್ದಾರೆ. ಪರವಾನಗಿ ಪಡೆಯಲು ನಿಯಮದಂತೆ ತಾಲೂಕು ತಹಸೀಲ್ದಾರರ ನಿರಾಕ್ಷೇಪಣಾ ಪತ್ರ (NOC) ಅಗತ್ಯವಿರುತ್ತದೆ.

Out Look Fashion

ಆದರೆ, ಪುತ್ತೂರು ಪ್ರಭಾರ ತಹಸೀಲ್ದಾರ್ ಪಟಾಕಿ ಅಂಗಡಿಗಳ NOC ನೀಡಲು ಪ್ರತಿ ಕಡತಕ್ಕೆ 10,000 ರೂಪಾಯಿ ಲಂಚ ಕೇಳುತ್ತಿದ್ದು, ಲಂಚ ನೀಡದವರ ಕಡತಗಳನ್ನು ಬಾಕಿ ಉಳಿಸಿಕೊಂಡು ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ತಹಸೀಲ್ದಾ‌ರ್ ಅವರು ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ನೀಡದೆ ಪಟಾಕಿ ಅಂಗಡಿಗಳಿಗೆ ಕೂಡಲೇ NOC ನೀಡಬೇಕೆಂದು ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಮಹಮ್ಮದ್ ಅಲಿ ಆಗ್ರಹಿಸಿದ್ದಾರೆ.

Jaya Refrigeration and Air Condition

ಸೋಮವಾರದಿಂದ ದೀಪಾವಳಿ ಹಬ್ಬ ಪ್ರಾರಂಭವಾಗುವುದರಿಂದ, ತಹಸೀಲ್ದಾರ್ ಯಾವುದೇ ವಿಳಂಬ ಮಾಡದೆ ಪಟಾಕಿ ಅಂಗಡಿಗಳಿಗೆ NOC ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮಹಮ್ಮದ್ ಅಲಿ ಆಗ್ರಹಿಸಿದ್ದಾರೆ. “ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ಗೌರವ ನೀಡುತ್ತೇವೆ. ಅದು ಬಿಟ್ಟು ಲಂಚಕ್ಕಾಗಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಿದರೆ ಅಂತಹವರಿಗೆ ಹೇಗೆ ಬುದ್ದಿ ಕಲಿಸಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಲಾಖೆಗಳ ಯಾವುದೇ ಅಧಿಕಾರಿಗಳು ಲಂಚ ಕೇಳಿದರೆ ಅಂತಹವರನ್ನು ಲೋಕಾಯುಕ್ತಕ್ಕೆ ಹಿಡಿದು ಕೊಡುವಂತೆ ಮಹಮ್ಮದ್ ಅಲಿ ಸಾರ್ವಜನಿಕರಲ್ಲಿ ಆಗ್ರಹಿಸಿದ್ದಾರೆ.