Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಉಡುಪಿ: ಮಲ್ಪೆ ಮತ್ತು ಉಡುಪಿ ಪ್ರದೇಶದಲ್ಲಿ ಪರವಾನಿಗೆ ಇಲ್ಲದೆ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದವರ ವಿರುದ್ಧ ಮಲ್ಪೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Out Look Fashion

ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಮಲ್ಪೆ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಪೊಲೀಸರಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ, ಉಪನಿರೀಕ್ಷಕ ಅನೀಲ್ ಕುಮಾರ್ ಡಿ ನೇತೃತ್ವದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿ ತೆಂಕನಿಡಿಯೂರು ಗ್ರಾಮದ ಹಿರಣ್ಯಧಾಮ ಲೇಔಟ್ ಪ್ರದೇಶದಲ್ಲಿ ದಾಳಿ ನಡೆಸಿದರು.

Jaya Refrigeration and Air Condition

ಆ ಸಂದರ್ಭದಲ್ಲಿ ಆರ್. ರಶೀದ್ ಅವರ ಮನೆಯಲ್ಲಿ 18 ವೈಟ್ ಬೋರ್ಡ್ ಕಾರುಗಳು ನಿಲ್ಲಿಸಿದ್ದನ್ನು ಪತ್ತೆಹಚ್ಚಲಾಯಿತು. ವಿಚಾರಣೆ ವೇಳೆ ರಶೀದ್ ಅವರು ಈ ಕಾರುಗಳನ್ನು ಪರ್ಮಿಟ್ ಇಲ್ಲದೆ ಬಾಡಿಗೆಗೆ ನೀಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2025ರಂತೆ, ಐಎಂವಿ ಕಾಯ್ದೆಯ ಕಲಂ 192(A), 66, 187 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ