Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣವನ್ನ ಎಸ್‌ಐಟಿ ತನಿಖೆಗೆ ಕೊಟ್ಟ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಪೊಲೀಸರ ವಿಚಾರಣೆ, ಸ್ಥಳ ಪರಿಶೋಧನೆಯಲ್ಲಿ ಅನಾಮಿಕ ಮಾಡಿದ ಆರೋಪ ಸಾಬೀತಾದಂತಿಲ್ಲ. ʻಧರ್ಮಸ್ಥಳ ಕ್ಷೇತ್ರದ ಜೊತೆ ನಾವುʼ ಎಂಬ ಘೋಷವಾಕ್ಯದಡಿ ಈಗಾಗಲೇ ಸಾವಿರಾರು ಜನ ಧರ್ಮಸ್ಥಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದು ಶಾಸಕರ ಜೊತೆ ಬಂದು ದೇವಸ್ಥಾನದಲ್ಲಿ ಸಂಕಲ್ಪ ಮಾಡಲಿದ್ದಾರೆ.

Out Look Fashion

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ರಾದ್ಧಾಂತ ಸೃಷ್ಟಿ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ಭಕ್ತರಿಗೂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಸಂಶಯ ಕಾಡಿತ್ತು. ಇದಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ, ಶೋಧನೆ ನಡೆಸಿದೆ. ಆದ್ರೆ ಶೋಧಕಾರ್ಯದಲ್ಲಿ ಯಾವುದೇ ಕುರುಹುಗಳು ಸಿಗದಿರುವ ಹಿನ್ನೆಲೆ ಇದೀಗ ಬಿಜೆಪಿ (BJP) ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಅಸ್ತ್ರ ಪ್ರಯೋಗಿಸಿದೆ. 

Jaya Refrigeration and Air Condition