Akshaya Sharadhotsava
Darbe Salon
Mahalingeshwara Car Air Condition
New Dot Dress Mart


ಕಡಬ:ಕಡಬ ತಾಲೂಕು ಚಾರ್ವಾಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಣಿಲ ದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

Out Look Fashion

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಅವರು ದ್ವಜಾರೋಹಣ ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು .ಈ ಸಂದರ್ಭದಲ್ಲಿ ಅತಿಥಿಗಳಾಗಿ ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಉದ್ನಡ್ಕ, ಕಾಣಿಯೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಂಗಮ್ಮ ಗುಜ್ಜರ್ಮೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲುರಾಯ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಲೋಚನಾ ಮಿಯೋಲ್ಪೆ, ತೇಜಕುಮಾರಿ ಉದ್ದ ಲಡ್ಡ, ಕೀರ್ತಿ ಕುಮಾರಿ ಅಂಬುಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಜಿತ್ ಮಾಚಿಲ, ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗಣೇಶ್ ಕುಂಬ್ಲಾಡಿ , ಬಾಲಕೃಷ್ಣರೈ ಕಾಸ್ಪಾಡಿ ಗುತ್ತು, ಹಸ್ತ ಪ್ರೊಡಕ್ಟ್ ಮಾಲಕರಾದ ವಿಶ್ವನಾಥ ಅಂಬುಲ, ನೇಮಣ್ಣಗೌಡ ಅಂಬುಲ ಊರಿನ ಅನೇಕ ನಾಗರಿಕ ಬಂಧುಗಳು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯ ಗುರುಗಳಾದ ಪದ್ಮಯ್ಯ ಗೌಡ ಸ್ವಾಗತಿಸಿ ಸಹ ಶಿಕ್ಷಕಿಯಾದ ಮೋಹಿನಿ ಧನ್ಯವಾದ ಅರ್ಪಿಸಿದರು.

Jaya Refrigeration and Air Condition