



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಒಕ್ಕೂಟದ ವ್ಯಾಪ್ತಿಯ ಸಣ್ಣಾರ ಪದ್ಮಯ್ಯ ನಾಯ್ಕರವರ ಪತ್ನಿ ಜಯಾ ರವರಿಗೆ ವೀರೇಂದ್ರ ಹೆಗ್ಗಡೆಯವರು ಮಂಜೂರು ಗೊಳಿಸಿದ ಗಾಲಿ ಕುರ್ಚಿ ಯನ್ನು ಜಯರವರ ಸ್ವಗ್ರಹದಲ್ಲಿ ವಿತರಿಸಲಾಯಿತು.


ಅನಾರೋಗ್ಯದಿಂದ ಶಾರೀರಿಕವಾಗಿ ಅಶಕ್ತರಾಗಿ ನಡೆಯಲು ಕಷ್ಟಪಡುತ್ತಿರುವ ಜಯಾರವರ ಮನವಿಯನ್ನು ಪರಿಗಣಿಸಿದ ಯೋಜನೆಯ ವತಿಯಿಂದ ಗಾಲಿಕುರ್ಚಿಯನ್ನು ಮಂಜೂರು ಮಾಡಿರುತ್ತಾರೆ.
ಗಾಲಿ ಕುರ್ಚಿಯನ್ನು ಫಲಾನುಭವಿ ಜಯಾರವರಿಗೆ ಹಸ್ತಾಂತರಿಸಿದ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆ ಎಂದು ಅನೇಕರ ಅಭಿಪ್ರಾಯವಿದೆ, ಆದರೆ ಧರ್ಮಸ್ಥಳ ಯೋಜನೆ ಸಹಾಯ ಮಾಡುವ ದೃಷ್ಟಿಯಿಂದ ಪ್ರಾರಂಭಿಸಲಾದ ಸಂಸ್ಥೆ ಎಂದು ಸಾರ್ವಜನಿಕರಿಗೆ ಅರ್ಥಪಡಿಸುವ ಅನಿವಾರ್ಯತೆ ಪ್ರಸ್ತುತ ಕಾಲಗಟ್ಟದಲ್ಲಿದೆ.

ಯೋಜನೆಯ ಮೂಲಕ ಸ್ವಾವಲಂಬಿಗಳಾಗಲು ಬ್ಯಾಂಕ್ ಮೂಲಕ ಆರ್ಥಿಕ ಸಹಾಯ ಪಡೆಯಲು ನೆರವಾಗುತ್ತದೆ. ಸಮಾಜದ ನ್ಯೂನ್ಯತೆಗಳನ್ನು ಗುರುತಿಸಿ ಅವಶ್ಯಕ ಸ್ಪಂದಿಸುವ ಸಾಂತ್ವಾನದ ಮೂಲಕ, ಧನಸಹಾಯ ಹಾಗೂ ಅಗತ್ಯ ಸಲಕರಣೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಪ್ರತಿಯೊಬ್ಬರೂ ಬರಬೇಕು ಎನ್ನುವುದು ಯೋಜನೆಯ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ನಿಕಟಪೂರ್ವ ವಲಯಾಧ್ಯಕ್ಷರು ಸತೀಶ್ ಎರ್ಕ. ಬಿಳಿನೆಲೆ ವಲಯ ಸಂರಕ್ಷಣಾ ವೇಧಿಕೆಯ ಅಧ್ಯಕ್ಷರು ಲೋಕನಾಥ ಗೌಡ ಕೈಕಂಭ, ಬಿಳಿನೆಲೆ ಒಕ್ಕೂಟದ ಅಧ್ಯಕ್ಷರು ರಾಜೇಶ್ ಒಗ್ಗು, ಒಕ್ಕೂಟದ ಕಾರ್ಯದರ್ಶಿ ಲಕ್ಷಣ ಗೌಡ ಸಣ್ಣಾರ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಎ ಸ್ಥಳೀಯರಾದ ದುರ್ಗಾ ದಾಸ್ ಹಾಗೂ ಜಯರವರ ಪತಿ ಪದ್ಮಯ್ಶ ನಾಯ್ಕ ಸಣ್ಣಾರ, ಮಗ ದಯಾನಂದ ನಾಯ್ಕ ಸಣ್ಣಾರ ಉಪಸ್ಥಿತರಿದ್ದರು.
