




ಪುತ್ತೂರು: ಉರ್ಲಾಂಡಿ ನಿವಾಸಿ ಮಹಿಳೆಯೋರ್ವರು ಆ.15ರಂದು ಮಧ್ಯಾಹ್ನ ಮನೆಯಂಗಳದ ಬಾವಿಗೆ ಬಿದ್ದು ಮೃತಪ್ಟಟಿರುವ ಘಟನೆ ಪುತ್ತೂರಿನ ಉರ್ಲಾoಡಿ ಎಂಬಲ್ಲಿ ನಡೆದಿದೆ.

ಉರ್ಲಾಂಡಿ ನಿವಾಸಿ ಶೇಖರ್ ಅವರ ಸಹೋದರಿ ಆರ್.ಗೀತಾ (59.ವ)ರವರು ಮೃತಪಟ್ಟ ಮಹಿಳೆ.

ಗೀತಾ ಅವರು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು, ಸಹೋದರ ಶೇಖರ್ ಅವರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಆ.15ರಂದು ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಬಳಿಕ ಅವರು ಮನೆಯಂಗಳದ ಬಾವಿಗೆ ಬಿದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ.
