Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಕಡಬ ತಾಲೂಕು ಚಾರ್ವಾಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ ವತಿಯಿಂದ ಸಾಮಾಜಿಕ ಪರಿಶೋಧನಾ ಶಾಲಾ ಸಭೆ ಹಾಗೂ ಪೋಷಕರ ಸಭೆಯನ್ನು ಆಯೋಜನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಡಲ್ ಅಧಿಕಾರಿಯಾಗಿ ಆಗಮಿಸಿದ ಸವಣೂರು ಮೆಸ್ಕಾಂ ಜೆ ಇ, ರಾಜೇಶ್ ರವರು ವಹಿಸಿ ಮಾತನಾಡುತ್ತಾ ಪೋಷಕರು ಮಕ್ಕಳ ಬಗ್ಗೆ ಜಾಗೃತವಹಿಸ ಬೇಕು ಎಂದು ತಿಳಿಸಿದರು.

Out Look Fashion

ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರವೀಣ್ ಸಮಗ್ರ ಶಿಕ್ಷಣ ಮತ್ತು ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಶಾಲೆಗೆ ಸಂಬಂಧಪಟ್ಟ ಬೇಡಿಕೆ ಹಾಗೂ ಶಿಕ್ಷಣ ಇಲಾಖೆ ಕುಂದು ಕೊರತೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಸವಿತಾ ಕುಮಾರಿ ವಿ, ಪ್ರತಿಭಾ ಕುಮಾರಿ ಎಚ್, ಪೋಷಕರು ಉಪಸ್ಥಿತರಿದ್ದರು.ಶಾಲಾ ಪುಟಾಣಿಗಳಾದ ವರ್ಷಿಕ ಡಿ ವಿ ಮತ್ತು ವರ್ಣಿಕ ಡಿ ವಿ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಶಿಕ್ಷಕ ವೃಂದ ಹಾಗೂ ಪೋಷಕರು ಭಾಗವಹಿಸಿದರು ಮುಖ್ಯ ಗುರುಗಳಾದ ಪದ್ಮಯ ಗೌಡ ಸ್ವಾಗತಿಸಿ, ಸಹ ಶಿಕ್ಷಕಿಯಾದ ಮೋಹಿನಿ ಧನ್ಯವಾದ ಅರ್ಪಿಸಿದರು.

Jaya Refrigeration and Air Condition