Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ಸಿಲಿಕಾನ್ ಸಿಟಿ ಜನರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಇಂದಿನಿಂದ ಕಾರ್ಯಾರಂಭಿಸಿದೆ. ಭಾನುವಾರ (ಆ.10) ಪ್ರಧಾನಿ ಮೋದಿಯವರಿಂದ ಚಾಲನೆಯಾದ ಬಳಿಕ ಸೋಮವಾರ (ಆ.11) ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

Out Look Fashion

ಬೆಂಗಳೂರಿನ ಟ್ರಾಫಿಕ್ ಜಂಗುಳಿಗೆ ಕೊಂಚ ಬ್ರೇಕ್ ಹಾಕಿರೋ ರೈಲುಗಾಡಿಯೇ ನಮ್ಮ ಮೆಟ್ರೋ. ಇದೀಗ ಸುಗಮ ಸಂಚಾರದ ಮತ್ತೊಂದು ಕನಸು ನನಸಾಗಿದೆ. ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ 6:30ರಿಂದಲೇ ಮೊದಲ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಿದೆ.

Jaya Refrigeration and Air Condition