Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ (ರಿ ), ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಇವರು ಭಾಗವಹಿಸಿ 28 ನೇ ಬಾರಿ ರಕ್ತದಾನ ಮಾಡಿದರು.

Out Look Fashion

ರಕ್ತದಾನವು ಮಹತ್ತರವಾದ ಮಾನವೀಯ ಸೇವೆಯಾಗಿದೆ. ಒಂದೇ ವ್ಯಕ್ತಿಯು ನೀಡುವ ರಕ್ತವು ಹಲವು ಜೀವಗಳನ್ನು ಉಳಿಸಲು ಸಹಕಾರಿ ಆಗುತ್ತದೆ.

Jaya Refrigeration and Air Condition

ಅಪಘಾತಕ್ಕೊಳಗಾದವರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು, ಗಂಭೀರ ರೋಗಿಗಳು ಮತ್ತು ಗರ್ಭಿಣಿಯರಿಗೆ ರಕ್ತದಾನವು ಜೀವದಾಯಕವಾಗುತ್ತದೆ.
ಸಮಾಜದಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಸಹೋದರತ್ವ ಬೆಳೆಸುವಲ್ಲಿ ರಕ್ತದಾನ ಪ್ರಮುಖ ಪಾತ್ರವಹಿಸುತ್ತದೆ ಎಂಬ ಆಶಯದೊಂದಿಗೆ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಎಲ್ಲರೂ ನಿಯಮಿತವಾಗಿ ರಕ್ತದಾನ ಮಾಡುವಂತ ವಿನಂತಿಸಿ, ಸಂಘಟಕರಿಗೆ ಗೌರವ ಪೂರ್ವಕವಾದ ಧನ್ಯವಾದವನ್ನು ತಿಳಿಸಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಕಲ್ಲಿಮಾರ್ ಮತ್ತು ರೋಟರಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.