Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಕಡಬ ತಾಲೂಕಿನ ಕೊಯಿಲದಲ್ಲಿ ಮೆಸ್ಕಾಂ ಪುತ್ತೂರು ವಿಭಾಗದ ಸಬ್ಸ್ಟೇಷನ್ 3 ವರ್ಷಗಳ ಹಿಂದೆ ಮಂಜೂರಾಗಿದ್ದು ಇದೀಗ ಕಾಮಗಾರಿ ಆರಂಭಗೊಂಡಿರುವುದು ಸಂತಸದ ವಿಚಾರ.

Out Look Fashion

ಆದರೆ ಈ ಕಾಮಗಾರಿ ಉಪ್ಪಿನಂಗಡಿ ಕೊಯಿಲ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರಸ್ತೆ ಸುರಕ್ಷತೆಯ ನಿಯಮಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಈ ಅಪಾಯಕಾರಿ 33 KV ವಿದ್ಯುತ್ ಮಾರ್ಗಕ್ಕೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ರಸ್ತೆ ಬದಿಯಿಂದ ಕನಿಷ್ಠ 6 ಮೀಟರ್ ಅಂತರ ಕಾಯ್ದುಕೊಂಡು ಅಳವಡಿಸಬೇಕು ಒಂದು ವೇಳೆ ರಸ್ತೆಯ ಇಕ್ಕೆಲೆಗಳಲ್ಲಿ ಜಾಗದ ಕೊರತೆಯಿದ್ದಲ್ಲಿ ನೆಲದಡಿಯಲ್ಲಿ ಭೂಗತ ಕೇಬಲ್ ಅಳವಡಿಸಬೇಕೆಂಬ ನಿಯಮವಿದೆ. ಆದರೆ ಪ್ರಸಕ್ತ ಹೊಸದಾಗಿ ಅಳವಡಿಕೆಯಾಗುತ್ತಿರುವ
ಈ ವಿದ್ಯುತ್ ಕಂಬಗಳನ್ನು ರಸ್ತೆಗೆ ತಾಗಿಕೊಂಡೇ ಅಳವಡಿಸುತ್ತಿರುವುದು ಅಪಾಯಕಾರಿಯಾಗಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಬರುವ ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಈ ರೀತಿ ರಸ್ತೆ ನಿಯಮ ಮೀರಿ ಅಪಾಯಕಾರಿಯಾಗಿ ಅಳವಡಿಸಿದ ಈ ವಿದ್ಯುತ್ ಕಂಬಗಳಿಗೆ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಾಘಾತವಾದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ .

Jaya Refrigeration and Air Condition

ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಇದಕ್ಕೆ ಭಾರೀ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಹಾಗೂ ರಾಜ್ಯ ಹೆದ್ದಾರಿಯಿಂದ ಕನಿಷ್ಠ 6 ಮೀಟರ್ ಅಂತರ ಬಿಟ್ಟು ಅಳವಡಿಸಬೇಕು ಎಂಬ ನಿಯಮ ಇದ್ದು ಈ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಇದರ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರೂ ವಿದ್ಯುತ್ ಕಂಬಗಳ ಸ್ಥಳಾಂತರವಾಗದೆ ಕಾಮಗಾರಿ ನಡೆಯುತ್ತಲೇ ಇದೆ. ಈ ಅಪಾಯಕಾರಿ ಅವೈಜ್ಞಾನಿಕ ಕಾಮಗಾರಿಯನ್ನು ತಡೆಹಿಡಿದು ಮುಂದೆ ಅಗಲಿರುವ ಅನಾಹುತಗಳನ್ನು ತಪ್ಪಿಸಬೇಕಿದ್ದರೆ ಎರಡೂ ಇಲಾಖೆಗಳು ಈಗಲೇ ಎಚ್ಚೆತ್ತುಗೊಳ್ಳಬೇಕಿದೆ!!!!!!