Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಯೋಜನಾ ಕಛೇರಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕಿನ ಸಭೆಯು ನಡೆಯಿತು.

Out Look Fashion


ತಾಲೂಕು ಜನ ಜಾಗೃತಿ ವೇಧಿಕೆಯ ಅಧ್ಶಕ್ಷರಾದ ಮಹೇಶ್ ಯನ್ ಕೆ ಸವಣೂರು ರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ ಕಡಬ ತಾಲೂಕು ಜನಜಾಗೃತಿ ವೇದಿಕೆಯು ಜನಪರ ಕಾರ್ಯಕ್ರಮಗಳೊಂದಿಗೆ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ.

Jaya Refrigeration and Air Condition

ಜನಜಾಗೃತಿ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಧರ್ಮಸ್ಥಳದ ಧರ್ಮಾಧಿಕಾರಿ ಪರಮ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ. ವಿ ಹೆಗ್ಗಡೆಯವರ ದೂರದೃಷ್ಟಿತ್ವದ ಕಾರ್ಯಕ್ರಮವಾಗಿದ್ದು. ಪ್ರೌಢ ವ್ಯವಸ್ಥೆಯಲ್ಲಿ ಮಕ್ಕಳು ದಾರಿ ತಪ್ಪದಂತೆ ಸ್ವಾಸ್ಥ್ಶ ಸಂಕಲ್ಪ ಕಾರ್ಯಕ್ರಮ, ಯೌವ್ವನದಲ್ಲಿ ತಪ್ಪು ದಾರಿ ಹಿಡಿಯದಂತೆ ಮಾದಕ ವಸ್ತುಗಳ ದುಷ್ಪರಿಣಾಮದ ಜಾಗೃತಿ ˌಹಾಗೂ ದುಶ್ಚಟಕ್ಕೆ ಒಳಗಾದ ವ್ಯಕ್ತಿಯ ಜೀವನ ಪರಿವರ್ತನೆಗೆ ಮದ್ಯವರ್ಜನ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಸಮುದಾಯದಲ್ಲಿ ಅನುಷ್ಟಾನಗೊಳಿಸುತ್ತಿರುವುದು ಶ್ಲಾಘನೀಯ. ಇಂತಹ ಮಹತ್ತರ ಕಾರ್ಯಕ್ರಮಗಳನ್ನು ಸಮುದಾಯಕ್ಕೆ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ಕುರಿತಾಗಿ ಪುರಾವೆ ರಹಿತ ಸುಳ್ಳು ವದಂತಿಗಳನ್ನು ಹರಡುತ್ತಿರುವ ದುಷ್ಟಕೂಟದವರ ಮೇಲೆ ಕಾನೂನು ಕ್ರಮವಾಗಬೇಕು ಕ್ಷೇತ್ರದ ಮೇಲೆ ಹಾಗೂ ಪೂಜ್ಯರ ಮೇಲಾಗುತ್ತಿರುವ ಕಳಂಕ ದೂರವಾಗಬೇಕು ಎನ್ನುವುದು ಕಡಬ ತಾಲೂಕು ಜನಜಾಗೃತಿ ವೇದಿಕೆಯ ಆಗ್ರಹವಾಗಿದೆ ಎಂದರು.


ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇಧಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ತಾಲೂಕು ಜನಜಾಗೃತಿ ವೇದಿಕೆ ಕಾರ್ಯಕ್ರಮಗಳನ್ನು ಅಭಿನಂದಿಸಿ, 2025-26ನೇ ಸಾಲಿನ ಕಾರ್ಯಕ್ರಮಗಳ ಅನುಷ್ಟಾನದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶಿವಪ್ರಸಾದ್ ರೈ ಮೈಲೇರಿ,ˌ ಕಡಬ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕರುಣಾಕರ ಗೊಖಟೆ, ಗೊಳಿತೊಟ್ಟು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನೊಣಯ್ಶ ಪೂಜಾರಿ ಅಂಬರ್ಜೆ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಾಲೂಕಿನ ಸಾಧನಾ ವರದಿವಾಚನ ಮಾಡಿ ಸ್ವಾಗತಿಸಿದರು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಧನ್ಯವಾದ ನೀಡಿದರು.
ಕಡಬ ತಾಲೂಕಿನ ವಿವಿಧ ಪ್ರೌಡಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆಗಸ್ಟ್ 18ರಿಂದ ಸಪ್ಟಂಬರ್ 20ರ ವರೆಗೆ ನಡೆಯಲಿರುವ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಜನಜಾಗೃತಿ ವೇಧಿಕೆ ಪಧಾದಿಕಾರಿಗಳನ್ನು ವಿವಿಧ ಮಜಲುಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಬಗ್ಗೆ ಸನ್ಮಾನಿಸಲಾಯಿತು.
ತಾಲೂಕಿನ ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು ಹಾಗೂ ನವಜೀವನ ಸಮಿತಿಯ ನಿರ್ವಹಣೆಯ ಪೋಷಕರು ಉಪಸ್ಥಿತರಿದ್ದು ಸಭೆಯ ಪ್ರಯೋಜನ ಪಡೆದುಕೊಂಡರು.
ಕಡಬ ವಲಯ ಮೇಲ್ವೀಚಾರಕ ವಿಜೇಶ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.