




ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಪದವಿನಂಗಡಿ ಹಾಗೂ ಅಂಚೆ ಇಲಾಖೆ ಯ ಸಹಯೋಗದಿಂದ ನಡೆದಂತಹ ಅಂಚೆ ಜನಸಂಪರ್ಕ ಅಭಿಯಾನವನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಆಚರಣೆಯೊಂದಿಗೆ, ಅಂಚೆ ಇಲಾಖೆಯಲ್ಲಿ ಜನಸಾಮಾನ್ಯರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ತನ್ನ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಜೋಡಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಶ್ರೀಯುತ ಸುಭಾಷ್ ಪಿ.ಸಾಲಿಯಾನ್ ರವರು ಅಂಚೆ ಇಲಾಖೆಯಲ್ಲಿ ದೊರೆಯುವಂತಹ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಗೌರವಾಧ್ಯಕ್ಷರಾದ ವಾಸುದೇವ ಕಾಮತ್ ರವರು ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳು ಹೊಸ ಸಮಿತಿಯು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ನಿಕಟ ಪೂರ್ವ ಮಹಾನಗರ ಪಾಲಿಕೆಯ ಸದಸ್ಯರುಗಳಾದ ಶ್ರೀಯುತ ಲೋಹಿತ್ ಅಮೀನ್ ಹಾಗೂ ಶ್ರೀಮತಿ ಸಂಗೀತಾ.ಆರ್. ನಾಯಕ್, ಯೂತ್ ಕ್ಲಬ್ ನ ಅಧ್ಯಕ್ಷರಾದ ಶ್ರೀಯುತ ಶೇಖರ್ ಪೂಜಾರಿ ಯವರು, ಆಶ್ರಯ ಮಿತ್ರವೃಂದದ ಅಧ್ಯಕ್ಷರಾದ ಶ್ರೀಯುತ ಸೆಲ್ವ ಕುಮಾರ್ ಸ್ಪೂರ್ತಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಜಯಲಕ್ಷ್ಮಿ ಚಂದ್ರಹಾಸ್ ಸಮಿತಿಯ ಗೌರವ ಸಲಹೆಗಾರರಾದ ಶ್ರೀಯುತ ಜಿ. ಪ್ರಶಾಂತ್ ಪೈ, ರಾಮ ಮುಗ್ರೋಡಿ, ಪಿ.ರಾಮ ಅಮೀನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಸಂದೀಪ್ ಬೊಂದೇಲ್ ಸ್ವಾಗತಿಸಿದರು
ಪ್ರಧಾನ ಕಾರ್ಯದರ್ಶಿ ನಂದ ಕಿಶೋರ್ ರವರು ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು. ಧನ್ಯವಾದವನ್ನು ಜಿ. ಪ್ರಶಾಂತ್ ಪೈ ಯವರು ನೀಡಿದರು
