



ಕಡಬ: ಕಡಬ ತಾಲೂಕು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ಶಿಕ್ಷಣ ನಿಧಿಯ ಚೆಕ್ ನ್ನು ಸಂಘದ ಅಧ್ಯಕ್ಷ ರಾದ ಗಣೇಶ್ ಕೆ.ಎಸ್ ಉದನಡ್ಕರವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಇದರ ಅಧ್ಯಕ್ಷರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು ರವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹಿರೇಮಠ್ ಹಾಗೂ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶೋಕ ಗೌಡ ರವರು ಉಪಸ್ಥಿತರಿದ್ದರು.

