




ಹಿಂದಿನ ಕಾಲದಲ್ಲಿ ಅಚರಿಸುತ್ತಿದ್ದ ಅಟಿ ತಿಂಗಳ ಆಚರಣೆ, ಜೀವನ ಪದ್ಧತಿಗಳಿಗೆ ತನ್ನದೇ ಆದ ಮಹತ್ವವಿದೆ.ಈ ಆಚರಣೆಗಳು ನಮ್ಮ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಚರಣೆಗಳು ಇಂತಹ ಅಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಮತ್ತು ಮಹತ್ವವನ್ನು ತಿಳಿಸುವ ಕಾರ್ಯವನ್ನು ನಾವುಗಳು ಮಾಡಬೇಕು ಎಂದು ಶ್ರೀ ದೇವಿಪ್ರಸಾದ್ ಗೌಡ ಸಜಂಕು ಹೇಳಿದರು.ಅವರು ಹಿರಿಯ ವಿದ್ಯಾರ್ಥಿ ಸಂಘ ಮತ್ತು ಎಸ್.ಡಿ.ಎಂ.ಸಿ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರುಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಣಿಯೂರು ಘಟ ಸಮಿತಿ ಇವುಗಳ
ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಾಣಿಯೂರು ಶಾಲಾ ವಠಾರದಲ್ಲಿ ನಡೆದ
ಆಟಿದ ಕೂಟ” ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪದ್ಮಯ್ಯ ಗೌಡ ಅನಿಲ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ ಸ.ಹಿ.ಪ್ರಾಶಾಲೆ ಕಾಣಿಯೂರು ಇವರು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ
:ಶ್ರೀ ಚಂದ್ರಶೇಖರ NSD ಮಾಜಿ ದೈಹಿಕ ಶಿಕ್ಷಣ ಶಿಕ್ಷಕರು, ಸ.ಹಿ.ಪ್ರಾ ಶಾಲೆ ಕಾಣಿಯೂರು
ಶ್ರೀ ವಿಶ್ವನಾಥ ಕೊಪ್ಪ ಅಧ್ಯಕ್ಷರು ಕಾಣಿಯೂರು ಗ್ರಾಮ ಪಂಚಾಯತ್, ಶ್ರೀ ರಾಮಣ್ಣ ಗೌಡ ಮುಗರಂಜ ಸದಸ್ಯರು, ಗ್ರಾಮ ಪಂಚಾಯತ್ ಕಾಣಿಯೂರು ಶ್ರೀ ವಸಂತ ಪೆರ್ಲೋಡಿ ಸದಸ್ಯರು, ಗ್ರಾಮ ಪಂಚಾಯತ್ ಕಾಣಿಯೂರು, ಶ್ರೀಮತಿ ಲಲಿತಾ ಗ್ರಾಮ ಪಂಚಾಯತ್ ಸದಸ್ಯರು ಕಾಣಿಯೂರು, ಶ್ರೀಮತಿ ಕಾವ್ಯಲಕ್ಷ್ಮೀ ಮೇಲ್ವಿಚಾರಕರು, ಒಡಿಯೂರು ಗ್ರಾಮ ವಿಕಾಸ ಯೋಜನೆ ಕಡಬ ತಾಲೂಕು ಶ್ರೀ ಬಾಲಕೃಷ್ಣ ಕೆ ಮುಖ್ಯಗುರುಗಳು, ಸ.ಹಿ.ಪ್ರಾ ಶಾಲೆ ಕಾಣಿಯೂರು, ಶ್ರೀ ಪರಮೇಶ್ವರ ಗೌಡ ಅನಿಲ ಅಧ್ಯಕ್ಷರು, ಎಸ್.ಡಿ.ಎಂ.ಸಿ ಸ.ಹಿ.ಪ್ರಾ ಶಾಲೆ ಕಾಣಿಯೂರು ಶ್ರೀಮತಿ ಯಶೋದ ಸಿ.ಆರ್.ಪಿ.ಕಾಣಿಯೂರು ಕ್ಲಸ್ಟರ್, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರಾದ ಗೌರಿ ಮಾದೋಡಿ , ಶ್ರೀಮತಿ ಯಶೋಧ ನೇರೋಳ್ತಡ್ಕ ಇವರುಗಳು ಉಪಸ್ಥಿತರಿದ್ದರು.ಹಳೆ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಅನಿಲ ವರದಿ ವಾಚನ ಮಾಡಿದರು.ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ ಅನಿಲ ಸ್ವಾಗತಿಸಿ, ಪದ್ಮಯ್ಯ ಗೌಡ ಅನಿಲ ವಂದಿಸಿದರು.ದೇವಕಿ ಕಟ್ಟತ್ತಾರು ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲೆಯ ಪ್ರಭಾರ ಮುಖ್ಯ ಗುರುಗಳಾದ ಶ್ರೀ ಬಾಲಕೃಷ್ಣ ಅಲೆಕ್ಕಾಡಿ ಯವರು ಜಂಟಿಯಾಗಿ ನೀಡಿದ ನೂತನ ಧ್ವಜ ಸ್ತಂಭದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಶ್ವನಾಥ ಕೊಪ್ಪರವರು ನೇರವೇರಿಸಿದರು.ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀನಿಧಿ ಅಚಾರ್ ವ್ಯವಸ್ಥಾಪಕರು ಕಾಣಿಯೂರು ಮಠ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ರೋಹಿತ್ ಗೌಡ ಅನಿಲ ಮೊಕ್ತೇಸರರು, ಶಿರಾಡಿ ರಾಜನ್ ದೈವಸ್ಥಾನ ಏಲಡ್ಕ ,ಕಾಣಿಯೂರು ಶ್ರೀ ವಸಂತ ಗೌಡ ಕಂಪ ಮೊಕ್ತೇಸರರು, ಶಿರಾಡಿ ರಾಜನ್ ದೈವಸ್ಥಾನ ಏಲಡ್ಕ ಕಾಣಿಯೂರು ಶ್ರೀ ಪುಟ್ಟಣ್ಣ ಗೌಡ ಮುಗರಂಜ ಅಧ್ಯಕ್ಷರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ ಅನಿಲ, ಉಪಾಧ್ಯಕ್ಷರಾದ ಯಶೋಧ ನೇರೋಳ್ತಡ್ಕ,ಶಾಲಾ ಮುಖ್ಯ ಗುರುಗಳಾದ ಶ್ರೀ ಬಾಲಕೃಷ್ಣ ಅಲೆಕ್ಕಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸೇವಾ ದೀಕ್ಷಿತೆ ಶ್ರೀಮತಿ ನಳಿನಿ, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ರಾಜೇಶ್ ಮೀಜೆ ಉಪಸ್ಥಿತರಿದ್ದರು.
ಆಟಿ ಕೂಟದ ವಿಶೇಷವಾಗಿ ಚಟ್ನಿ, ಸೊಪ್ಪು ಪಲ್ಯ, ತಿಂಡಿ ತಿನಸುಗಳ ಸ್ಪರ್ಧೆ , ಮಕ್ಕಳಿಗೆ, ಮಹಿಳೆಯರಿಗೆ ಪುರುಷರಿಗೆ ಫನ್ನಿ ಗೇಮ್ಸ್, ಚೆನ್ನೆ ಆಟ ,ಎಕ್ಕಡಿ ಆಟ ಮೊದಲಾದ ಆಟಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಬೆಳಿಗ್ಗೆ ಉಪಹಾರಕ್ಕೆ ಪತ್ರೊಡೆ ಪಾನಗ , ಮಧ್ಯಾಹ್ನ ತುಳುನಾಡ ಸಾಂಪ್ರದಾಯಿಕ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಹೂವಿನ ಗಿಡಗಳ ಪ್ರದರ್ಶನ, ಮಾರಾಟ,
ಲಕ್ಕಿ ಕೂಪನ್ ಸ್ಪರ್ಧೆ ನಡೆಯಿತು.
