




ಪುತ್ತೂರು: ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ನಲ್ಲಿ ಆಟಿ ಪ್ರಯುಕ್ತ ಆಟಿ ಆಟೋಟ ಜಿಮ್ ಡ್ ಒಂಜಿ ದಿನ ಕಾರ್ಯಕ್ರಮ ಆಗಸ್ಟ್ 3 ಆದಿತ್ಯವಾರದಂದು ನಡೆಯಿತು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಜಿಮ್ ನ ಸದಸ್ಯರಿಗೆ ವಿವಿಧ ಮನೋರಂಜನ ಆಟಗಳ ಜೊತೆಗೆ ದೇಹದಾಡ್ಯ ಪ್ರದರ್ಶನ ನಡೆಯಿತು. ಮತ್ತು ಅಪರೂಪದ ಖಾದ್ಯಗಳ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಸ್ಟೋಫರ್ ಸಂಸ್ಥೆಯ ಮಾಲಕರಾದ ವೇಲೇರಿಯಸ್ ಡಯಾಸ್ ವಹಿಸಿದ್ದರು.
ಈ ಸಂದರ್ಭದಲ್ಲಿ MLC ಸರ್ಕಾರಿ ಆಪ್ತ ಸಹಾಯಕರಾದ ಅವಿನಾಶ್ ಬಿ. ಆರ್, ಡಾ ಅಜಯ್, ಶ್ರೀಮತಿ ರೇಖಾ ನಾಯರ್, ಡಾ ರಾಜಗೋಪಾಲ್ ಕೆ.ಟಿ ಮತ್ತು ಜಿಮ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
