




ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಇದರ ಕಾಣಿಯೂರು ವಲಯ ಸಮಿತಿಯ ಸಾಮಾನ್ಯ ಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ನ ಕಣ್ವರ್ಷಿ ಸಭಾಂಗಣದಲ್ಲಿ ನಡೆಯಿತು. ಕಾಣಿಯೂರು ವಲಯ ಸಮಿತಿಯ ಅಧ್ಯಕ್ಷರಾದ ರಶ್ಮಿ ಅಗಳಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಪರಮೇಶ್ವರ ಅನಿಲ ಮತ್ತು ವಲಯದ ಕೋಶಾಧಿಕಾರಿಯಾದ ಶೀವಪ್ಪ ಬಂಡಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯದ ಸಭೆಯಲ್ಲಿ ವಿವಿಧ ವಿಷಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.ಪ್ರಧಾನ ಕಾರ್ಯದರ್ಶಿಯಾದ ಸುಮಲತಾ ದೇವಸ್ಯ ಸ್ವಾಗತಿಸಿ ವಲಯದ ಸಂಘಟನಾ ಕಾರ್ಯದರ್ಶಿಯಾದ ಜಯಶ್ರೀ ಕಂಡೂರು ಧನ್ಯವಾದ ಸಮರ್ಪಿಸಿದರು.

