Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮೊಗ್ರು : ನಾಳೆ ಆ 03 ಜೈ ಶ್ರೀ ರಾಮ್ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ – ಮುಗೇರಡ್ಕ -ಮೊಗ್ರು
ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ ಮೊಗ್ರು ಗ್ರಾಮದ ಮುಗೇರಡ್ಕ ಪರಿಸರದ ಗೌಡತ್ತಿಗೆ ಗದ್ದೆಯಲ್ಲಿ ನಾಳೆ ಆಗಸ್ಟ್ 03 ಸಿರಿ ಸಮೃದ್ಧಿ ನೇಜಿ ನೆಡುವ ಕಾರ್ಯಕ್ರಮ ನಡೆಯಲಿದೆ.

Out Look Fashion

ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಗೌರವಾಧ್ಯಕ್ಷರಾದ ಉದಯ ಭಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕರಾದ ಮೋಹನ್ ಕುಮಾರ್, ಹೈಕೋರ್ಟ್ ವಕೀಲರಾದ ಪ್ರಶಾಂತ್ ಬಿ.ಕೆ, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ತುಳು ಚಲನಚಿತ್ರ ನಟ ಮತ್ತು ನಿರ್ದೇಶಕರಾದ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ, ಮಡoತ್ಯಾರು ಶ್ರೀ ದುರ್ಗಾ ಇಂಡಸ್ಟ್ರೀಸ್ ಲ. ಉಮೇಶ್ ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಮೇಲ್ವಿಚಾರಕರಾದ ಕು.
ಶಿಲ್ಪಾ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ,ಪ್ರಗತಿಪರ ಕೃಷಿಕರಾದ ಚಂದ್ರಹಾಸ ಗೌಡ ದೇವಸ್ಯ, ದೇವಿಪ್ರಸಾದ್ ಗೌಡ ಕಡಮ್ಮಾಜೆ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ, ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ರಮೇಶ್.ಎನ್ ಭಾಗವಹಿಸಲಿದ್ದಾರೆ. ಗದ್ದೆ ನೀಡಿದವರು ಶ್ರೀ ಕ್ಷೇತ್ರ ಮುಗೇರಡ್ಕ, ಶ್ರೀ ಜಿನ್ನಪ್ಪ ಗೌಡ ಗೌಡತ್ತಿಗೆ, ಶ್ರೀಮತಿ ಉಮಾವತಿ ಗೌಡ ಗೌಡತ್ತಿಗೆ, ಭೋಜನದ ವ್ಯವಸ್ಥೆ ಶ್ರೀ ಮನೋಹರ ಅಂತರ – ಮುಗೇರಡ್ಕ, ಸಹಕಾರ ಕೊರಗಪ್ಪ ಕೊಳಬ್ಬೆ, ನೇಜಿ ನೀಡಿದವರು ಧನ್ವಿತ್ ಪ್ರಶಾಂತ್ ಗೌಡ ಉರುoಬುತ್ತಿಮಾರ್ ಪದ್ಮುಂಜ ಇವರು ಸಹಕರಿಸಲಿದ್ದಾರೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Jaya Refrigeration and Air Condition