




ಧರ್ಮಸ್ಥಳ : ಇಡೀ ದೇಶವೇ ಬೆಚ್ಚಿಬಿದ್ದಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ಮೊದಲ ಐದು ಕಡೆಗಳಲ್ಲಿ ಯಾವುದೇ ಕುರುಹು ಸಿಗದೆ ಅನುಮಾನಕ್ಕೆ ಕಾರಣವಾಗಿದ್ದ ಅನಾಮಧೇಯ ದೂರುದಾರನ ಆರೋಪಕ್ಕೆ, 6ನೇ ಗುರುತಿನ ಸ್ಥಳದಲ್ಲಿ 12 ಮೂಳೆಗಳು ಪತ್ತೆಯಾಗುವ ಮೂಲಕ ಕಾರ್ಯಾಚರಣೆಗೆ ರೋಚಕ ತಿರುವು ನೀಡಿದೆ.

ಇಂದು ಅನಾಮಿಕ ಗುರುತು ಮಾಡಿದ್ದ 7 ನೇ ಸ್ಥಳದಲ್ಲಿ SIT ಕಾರ್ಯಾಚರಣೆ ಆರಂಭ ಮಾಡಿದೆ.
6ನೇ ಮತ್ತು 7ನೇ ಗುರುತಿನ ಸ್ಥಳಗಳು ಕಂದಾಯ ಇಲಾಖೆಗೆ ಸೇರಿದ ‘ಪರಂಬೊಕು” ಜಾಗವಾಗಿರುವುದರಿಂದ ಇಲ್ಲಿ ಸಣ್ಣ ಜೆಸಿಬಿ ಯಂತ್ರ ಬಳಸಲು ಅವಕಾಶವಿದೆ. ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಎರಡೂ ಸ್ಥಳಗಳಿಗೆ ಶೀಟ್‌ಗಳನ್ನು ಅಳವಡಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತರ ನಿರ್ದೇಶನದಂತೆ, ಇಂದಿನಿಂದ ಎರಡು ಕ್ಯಾಮೆರಾಗಳನ್ನು ಬಳಸಿ ಸ್ಥಳದ ಸಂಪೂರ್ಣ ವಿಡಿಯೊ ಚಿತ್ರೀಕರಣ ನಡೆಸಲು ಎಸ್‌ಐಟಿ ಮುಂದಾಗಿದೆ.

ಅನಾಮಿಕ ದೂರುದಾರನೊಂದಿಗೆ ಎಸ್‌ಐಟಿ ಅಧಿಕಾರಿಗಳ ತಂಡವು ಬೆಳ್ತಂಗಡಿ ಕಚೇರಿಯಿಂದ 7ನೇ ಗುರುತಿನ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ.
