




ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಯೋಧರನ್ನು ಗೌರವಿಸುವ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.


ಭಾರತೀಯ ಸೇನೆಯಲ್ಲಿ ಸುಬೇದಾರರಾಗಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಬಿಜಳ ನಿವಾಸಿಯಾಗಿರುವ ನಿವೃತ್ತ ಯೋಧ ಶ್ರೀ ಲೋಕೇಶ್ ಕೆ ಜಿ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ರವರು ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು , ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಪಿ ಬಿ ಶಿವಕುಮಾರ್ , ಜಿಲ್ಲಾ ಟೆಲಿಕಾಂ ಸಲಹಾ ಮಂಡಳಿ ಸದಸ್ಯ ನಿತೀಶ್ ಕುಮಾರ್ ಶಾಂತಿವನ , ನೆಟ್ಟಣಿಗೆ ಮುಡ್ನೂರು ಮಹಾಶಕ್ತಿಕೇಂದ್ರ ದ ಅಧ್ಯಕ್ಷ ರಾಜೇಶ್ ರೈ ಪರ್ಪಂಜ , ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಪಲ್ಲತ್ತಾರು ,ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಪ್ರಮುಖರಾದ ಮಹೇಶ್ ಕೇರಿ ಹಾಗೂ ಗ್ರಾಮಾಂತರ , ನಗರ ಮಂಡಲದ ಪದಾಧಿಕಾರಿಗಳು , ಬೂತ್ ನ ಅಧ್ಯಕ್ಷರು ಕಾರ್ಯದರ್ಶಿಗಳು , ನಿವೃತ್ತ ಯೋಧ ಲೋಕೇಶ್ ರವರ ಶ್ರೀಮತಿ ಯವರಾದ ಶ್ರೀ ಮತಿ ಲಕ್ಷ್ಮಿ , ಮಗಳು ಜಾನ್ವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಪ್ರಮುಖರಾದ ಮಹೇಶ್ ಕೇರಿ
