Akshaya Sharadhotsava
Darbe Salon
Mahalingeshwara Car Air Condition
New Dot Dress Mart
Screenshot

ಪುತ್ತೂರು: ಉಪ್ಪಿನಂಗಡಿಯಿಂದ ಪುತ್ತೂರು ಸಂಪರ್ಕಿಸುವ ರಸ್ತೆಯನ್ನು PWD ದುರಸ್ತಿ ನಡೆಸದೆ ಇದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಬನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಹಾಯಕ ಆಯುಕ್ತರು ಪುತ್ತೂರು, ಆರಕ್ಷಕರ ಠಾಣೆ ಪುತ್ತೂರು, ತಹಶೀಲ್ದಾರರು ಪುತ್ತೂರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿಯನ್ನು ನೀಡಿದ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆಯ ನಿರ್ಧಾರವನ್ನು ತಿಳಿಸಿದರು.

Out Look Fashion

ಜಿಲ್ಲಾ ಕೇಂದ್ರವಾಗಲು ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳ ಅಡಿಪಾಯದ ವ್ಯವಸ್ಥೆಯನ್ನು ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿದೆ.

Jaya Refrigeration and Air Condition

ಪುತ್ತೂರು ನಗರದ ನಂತರ ತಾಲೂಕಿನ ಅತೀ ದೊಡ್ಡ ಪೇಟೆಯಾದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ ರಾಜ್ಯ ಹೆದ್ದಾರಿಗೆ ಪರಿವರ್ತಿಸಲಾಗಿದೆ. ಪ್ರಸ್ತುತ ಬದಲಾಗಿ ಹೊಸ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಈ ರಸ್ತೆಗೆ ಪುತ್ತೂರು ನಗರದಿಂದ ಸೇಡಿಯಾಪು ವರೆಗೆ ನಿಮ್ಮ ಯಾವುದೇ ನಿರ್ವಹಣೆಯನ್ನು ಮಾಡದೆ ಜನರು ನಿತ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

PWD ರಸ್ತೆಯಲ್ಲಿರುವ ಹೊಂಡಗಳಿಂದಾಗಿ ಅಪಘಾತಗಳಾಗುವ ಅಪಾಯ ಎದುರಾಗಿದೆ. ಅನೇಕ ವಾಹನಗಳು ಈ ಹೊಂಡಗಳಲ್ಲಿ ಹೋತು ಹೋಗಿ ವಾಹನ ಸಂಚಾರಕ್ಕೂ ಅಡಚನೆಯಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸಲು ಭಯಭೀತರಾಗಿರುವ ಸಾರ್ವಜನಿಕರು ಈ ಅವ್ಯವಸ್ಥೆಯ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ದೂರುಗಳನ್ನು ನೀಡುತ್ತಿದ್ದು ಹೋರಾಟ ನಡೆಸಲು ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕರ ಈ ಸಮಸ್ಯೆಗಳಿಗೆ ಸ್ಪಂದಿಸಿ ಅವರನ್ನು ಜೊತೆಗೂಡಿಸಿಕೊಂಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ.

ದಿನಾಂಕ 25.07.2025 ಶುಕ್ರವಾರದ ಒಳಗೆ ತಕ್ಷಣ ರಸ್ತೆ ದುರಸ್ತಿಗೊಳಿಸಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿ ಆಗ್ರಹಿಸುತ್ತಾ ಇದಕ್ಕೆ ತಪ್ಪಿದಲ್ಲಿ ದಿನಾಂಕ 26.07.2025 ಶನಿವಾರದಿಂದ ಇದರ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಮುಂದಕ್ಕೆ ಇದರಿಂದಾಗುವ ಎಲ್ಲಾ ಅನಾಹುತಗಳಿಗೆ ನಿಮ್ಮ ಇಲಾಖೆಯೇ ನೇರ ಹೊಣೆಯಾಗಲಿದೆ. ಎಂದು ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಪುತ್ತೂರು ಅರ್ಯಾಪು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ ಎಸ್ ಕೆಮ್ಮಾಯಿ, ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯು ಪುತ್ತೂರನ್ನು ಸಂಪರ್ಕಿಸುವ ಅತೀ ಪ್ರಮುಖ ರಸ್ತೆಯಾಗಿದ್ದು ಸಾವಿರಾರು ವಾಹನಗಳು ಓಡಾಡುವ ರಸ್ತೆಯಾಗಿದೆ. ಹಿಂದೆ ಆಡಳಿತದಲ್ಲಿ ಇದ್ದ ಬಿಜೆಪಿ ಸರ್ಕಾರ ಇದನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ನಡೆಸಿತ್ತು ಪ್ರಸ್ತುತ ಇದರ ನಿರ್ವಹಣೆಯನ್ನು ಮಾಡದೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ಸಂಪೂರ್ಣ ಹದಗೆಟ್ಟು ನಿತ್ಯ ಅಪಾಯವನ್ನು ಎದುರಿಸುವಂತಾಗಿದೆ, ಅಪಘಾತಗಳು ರಸ್ತೆಯಲ್ಲಿ ವಾಹನಗಳು ಹೂತು ಹೋಗುವ ಪ್ರಕರಣಗಳು ದಿನನಿತ್ಯ ನಡೆಯುತ್ತಿದೆ. ತಕ್ಷಣ ಇದನ್ನು ಸರಿ ಪಡಿಸದಿದ್ದಲ್ಲಿ ಬಿಜೆಪಿ ಮತ್ತು ಸಾರ್ವಜನಿಕರೊಂದಿಗೆ ಸೇರಿಕೊಂಡು ಪ್ರತಿಭಟನೆ ಮಾಡುವುದಾಗಿ ಹೇಳಿದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಪ್ರಭು ಮಾತನಾಡಿ
ಈಗಾಗಲೇ ಹಲವರು ಅಪಘಾತ ಗಳಾಗಿದ್ದು ಸವಾರರು ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ ಇದೇ ರೀತಿ ನಿರ್ಲಕ್ಷಿಸಿ ಅಪಘಾತವಾದರೆ ಇನ್ನಷ್ಟು ಸಾವು ನೋವು ಅಂಗವಿಕಲತೆ ಆಗಬಹುದು ಆದುದರಿಂದ ಶೀಘ್ರವಾಗಿ ದುರಸ್ಥಿ ನಡೆಯಲಿ ಎಂದರು

ಈ ಸಂದರ್ಭದಲ್ಲಿ ಚಿಕ್ಕಮುಡ್ನೂರು ಬಿಜೆಪಿ ಶಕ್ತಿಕೇಂದ್ರದ ಕಾರ್ತಿಕ್ ಅಂದ್ರಟ್ಟ , ಬೂತ್ ಅಧ್ಯಕ್ಷರುಗಳಾದ ದಯಾನಂದ ಅನಂತಿಮಾರು, ಪ್ರಕಾಶ್ ಚಿಕ್ಕಮುಡ್ನೂರು, ಬನ್ನೂರು ಪಂಚಾಯತ್ ಅಧ್ಯಕ್ಷೆ ಸ್ಮಿತಾ ಕೃಷ್ಣ, ಪಂ. ಮಾಜಿ ಅಧ್ಯಕ್ಷೆ ಜಯರಮೇಶ್, ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಸದಸ್ಯರಾದ ರಾಘವೇಂದ್ರ ಅಂದ್ರಟ್ಟ,
ತಿಮ್ಮಪ್ಪ ಮೂಡಾಯೂರು, ಬಿಜೆಪಿ ಕಾರ್ಯಕರ್ತರಾದ ನವೀನ್ ಕಂಜೂರು, ಹರೀಶ್, ಹಾಗೂ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು