



ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ದೇವನಾರಿ ಎಂಬ ಪ್ರಕೃತಿ ರಮಣೀಯವಾದ ಸ್ಥಳದಲ್ಲಿ ಶ್ರೀ ಅರ್ಧನಾರೀಶ್ವರ ದೇವರ ತೀರ್ಥ ಕ್ಷೇತ್ರವಿದೆ, ಶಿವ ಪಾರ್ವತಿಯರಿಬ್ಬರು ಅರ್ಧನಾರೀಶ್ವರ ಸ್ವರೂಪದಲ್ಲಿರುವ ಜಿಲ್ಲೆಯ ಏಕೈಕ ಕ್ಷೇತ್ರವಿದು. ಮುನಿಗಳ ತಪೋಬಲದಿಂದ ಶಿವ ಪಾರ್ವತಿಯರನ್ನು ಪ್ರತ್ಯಕ್ಷೀಕರಿಸಿ ಪ್ರತಿಷ್ಠಾಪಿಸಿದ ಪರಮ ಪಾವನ ಪುಣ್ಯಕ್ಷೇತ್ರವಿದು, ಇಲ್ಲಿಯ ಅಪೂರ್ವ ಶಿವಲಿಂಗ ಇತಿಹಾಸ ತಜ್ಞರ ಪ್ರಕಾರ ಸುಮಾರು 2000 ವರ್ಷಗಳಿಂದಲೂ ಪುರಾತನವಾದುದೆಂದು ಪ್ರತೀತಿ ಇದೆ, ಇದು ಪೂರ್ಣಲಿಂಗ ರೂಪಿಯಾಗಿರುತ್ತದೆ. ಧರ್ಮ ದೇವತೆಗಳಾದ ಉಳ್ಳಾಯ ಉಳ್ಳಾಲ್ತಿ ಸಾನಿಧ್ಯವಿರುವ ಪುಣ್ಯ ಕ್ಷೇತ್ರವಿದು. ದೇವಸ್ಥಾನದ ಎಡ ಭಾಗದಲ್ಲಿ ಹರಿಯುವ ಪುಣ್ಯತೀರ್ಥ, ಮುನಿಗಳ ತಪೋಭೂಮಿಯಿರುವ ಮಂಜುಕುಂಡವೆಂಬ ಸ್ಥಳದಿಂದ ಹರಿದು ಬರುತ್ತದೆ ಕಂಕಣ ಭಾಗ್ಯ, ಚರ್ಮರೋಗ, ಗ್ರಹಚಾರ ಹಾಗೂ ಇನ್ನಿತರ ಸರ್ವ ದೋಷಗಳಿಗೂ ಈ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದರೆ ಪರಿಹಾರವಾಗುತ್ತದೆನ್ನುವ ನಂಬಿಕೆಯಿಂದ ಸಾವಿರಾರು ಭಕ್ತರು ಈ ದಿನ ತೀರ್ಥ ಸ್ನಾನ ಮಾಡುತ್ತಾರೆ.


ಇಂದಬೆಟ್ಟು ಗ್ರಾಮ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಜುಲೈ 24 ಗುರುವಾರ ಆಟಿ ಅಮಾವಾಸ್ಯೆ ದಿನ ವಿಶೇಷ ತೀರ್ಥ ಸ್ಥಾನ ನಡೆಯಲಿದೆ.

ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಅರ್ಧನಾರೀಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಊರ ಪರವೂರ ಹತ್ತು ಸಮಸ್ತರ ಪರವಾಗಿ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
