Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು: ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ, ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಇದರ ಆಗಮ ಘಟಿಕೋತ್ಸವ-2025′ ಜು.19 ರಂದು ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

Out Look Fashion

ಈ ಸಂದರ್ಭದಲ್ಲಿ ಏಳು ಆಗಮ ವಿಭಾಗಗಳ ಸುಮಾರು 2000 ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 43 ವಿದ್ಯಾರ್ಥಿಗಳ ಪೈಕಿ ವಾತುಲಾಗಮ ಪ್ರವೀಣ ಪದವಿಯನ್ನು ಪೊಳಲಿ ಗಿರಿಪ್ರಕಾಶ್ ತಂತ್ರಿ ಹಾಗೂ ಪುತ್ತೂರಿನ ವಾಸ್ತುತಜ್ಞ ಪಿ.ಜಿ ಜಗನ್ನಿವಾಸ ರಾವ್ ರವರಿಗೆ ಕರ್ನಾಟಕ ಸರಕಾರದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಆಯುಕ್ತ ಡಾ.ವೆಂಕಟೇಶ ಎಂ.ವಿ (ಐಎಎಸ್), ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಆಗಮ ಶಾಸ್ತ್ರ ಪ್ರಮಾಣ ಪತ್ರ, ಪದಕ ಹಾಗೂ ನಗದು ನೀಡಿ ಗೌರವಿಸಲಾಯಿತು.

Jaya Refrigeration and Air Condition

ಪಿ.ಜಿ.ಜಗನ್ನಿವಾಸ ರಾವ್ ರವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ವೇದ ತಂತ್ರಾ ಗಮ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದರು.