




ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬವನ್ನು ಕೆಲವು ವರ್ಷಗಳ ಹಿಂದೆ ನೂತನ ತಾಲ್ಲೂಕಾಗಿ ಘೋಷಣೆ ಮಾಡಲಾಗಿತ್ತು. ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಪಟ್ಟಣ ಪಂಚಾಯಿತಿಗಳಲ್ಲಿ ಕಡಬವು ಒಂದಾಗಿದ್ದು, ಐದು ವರ್ಷಗಳಿಂದ ಚುನಾವಣಾ ಆಯೋಗ ಯಾವುದೇ ಚುನಾವಣೆಯನ್ನು ಕೈಗೊಂಡಿರಲಿಲ್ಲ.

ಚುನಾವಣೆ ಇಲ್ಲದೆ ಕಡಬಡಲ್ಲಿ ರಾಜಕೀಯ ಚಟುವಟಿಕೆ ಸ್ತಗಿತವಾಗಿತ್ತು, ಇದೀಗ ಕಡಬ ಪಟ್ಟಣ ಪಂಚಾಯಿತಿ ಚುನಾವಣೆ ಆಗಸ್ಟ್ 17ರಂದು ನಡೆಯುವುದಾಗಿ ದಿಡೀರ್ ಘೋಷಣೆಯಾಗಿದ್ದು. ಬಿಜೆಪಿ- ಕಾಂಗ್ರೆಸ್ ಪಕ್ಷಗಳ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

