




ಪುತ್ತೂರು : ಪುತ್ತೂರು ಅರುಣಾ ಕಲಾಮಂದಿರದಿಂದ ಎ.ಪಿ.ಎಂ.ಸಿ ಸಂಪರ್ಕಿಸುವ ರಸ್ತೆಯ ಆದರ್ಶ ಆಸ್ಪತ್ರೆಯ ಮುಂಭಾಗ ಬುಧವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಜಲವೃತವಾಗಿದೆ. ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಉಂಟಾಗಿದೆ.


ಕಳೆದ ಹಲವು ಭಾರಿ ಆದರ್ಶ ಆಸ್ಪತ್ರೆಯ ಮುಂಭಾಗ ಸಣ್ಣ ಮಳೆಗೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದರೂ ಇದಕ್ಕೆ ಸಂಬಂಧ ಪಟ್ಟ ಯಾವುದೇ ಅಧಿಕಾರಿಗಳು ನಗರ ಆಡಳಿತ, ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಚರಂಡಿ ದುರಸ್ಥಿ ಕೆಲಸ ಕೂಡ ಮಾಡ್ತಾ ಇಲ್ಲ. ಒಂದು ತಾಸು ಮಳೆ ಬಂದರೆ ರಸ್ತೆ ಸಂಪೂರ್ಣ ಮುಳುಗಡೆಯಾಗುತ್ತದೆ. ಎಲ್ಲಾ ವಾಹನಗಳು ನೀರಿನಲ್ಲಿ ತೇಲಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ನಗರ ಆಡಳಿತ ಶಾಶ್ವತ ಪರಿಹಾರ ನೀಡಬೇಕೆಂದು ಸಾರ್ವಜನಿಕರ ಅಗ್ರಹವಾಗಿದೆ.

