Akshaya Sharadhotsava
Darbe Salon
Mahalingeshwara Car Air Condition
New Dot Dress Mart


ಪುತ್ತೂರು : ಪುತ್ತೂರಿನಲ್ಲಿ ಅಜಿತ್‌ ಮಡಿಕೇರಿ ಅವರನ್ನು ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರಿನ ಶಾಸಕರಿಗೆ ತಾಕತ್ತಿದ್ದರೆ ತಡೆಯಲಿ ಎಂದು ಹೇಳುವ ಮೂಲಕ ಶಾಸಕ ಅಶೋಕ್ ರೈ ಅವರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಸವಾಲು ಹಾಕಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಬಂದಿದ್ದ ಅಜಿತ್‌ ಮಡಿಕೇರಿ ಪುತ್ತೂರು ಶಾಸಕರನ್ನು ಅಯೋಗ್ಯ ಎಂದು ಸಂಬೋಧಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿದ್ದ ಅಶೋಕ್‌ ರೈ ಅವರು ಯಾರನ್ನೇ ಆಗಲಿ ಏಕವಚನದಲ್ಲಿ ಸಂಬೋಧಿಸುವುದು ಸಂಸ್ಕೃತಿಯಲ್ಲ. ಎಲ್ಲಿಂದಲೋ ಬಂದು ಮಾತನಾಡಿ ಹೋಗಿದ್ದಾನೆ. ಆತ ಇನ್ನೂ ಸ್ವಲ್ಪ ಹೊತ್ತು ಪುತ್ತೂರಿನಲ್ಲಿ ಇರಬೇಕಿತ್ತು. ಆತನಿಗೆ ಬುದ್ದಿ ಕಲಿಸುತ್ತಿದ್ದೆ ಎಂದು ಅಶೋಕ್ ರೈಗಳು ಹೇಳಿದ್ದರು.
ಇದಕ್ಕೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಭೆಯಲ್ಲಿ ಮಾಜಿ ಶಾಸಕರು ಹಾಲಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ.

Out Look Fashion
Screenshot

ಪುತ್ತೂರಿನ ಬಿಜೆಪಿ ಕಾರ್ಯಕರ್ತರು ‘ಬಳೆ’ ತೊಟ್ಟುಕೊಂಡು ರಾಜಕೀಯ ಮಾಡುವವರಲ್ಲ. ಸ್ವಾಭಿಮಾನಿಗಳು. ಯಾವುದಾದರೂ ಕೆಲಸಕ್ಕಾಗಿ ಶಾಸಕರ ಹತ್ತಿರ ಹೋದರೆ ಕಾಂಗ್ರೇಸ್ ಶಾಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡಿಸಲು ಮನವಿ ನೀಡಲು ಹೋದಾಗಲೂ ಇದೇ ಪರಿಸ್ಥಿತಿ. ನಾನು ಶಾಸಕನಾಗಿದ್ದಾಗ ಕಾಂಗ್ರೆಸ್‌ ಹಾಗೂ ಇತರ ಪಕ್ಷದವರು ನನ್ನಲ್ಲಿಗೆ ಬರುತ್ತಿದ್ದರು. ಅವರಿಗೆ ಕೆಲಸವೂ ಮಾಡಿಕೊಟ್ಟಿದ್ದೇನೆ ನಾನು ಇವರ ತರ ಮಾಡಿಲ್ಲ ಎಂದು ಹೇಳಿದ್ದಾರೆ.

Jaya Refrigeration and Air Condition