




ಪುತ್ತೂರು ಶಾಸಕ ಅಶೋಕ್ ರೈ ಅವರ ಕನಸಿನ ಕೂಸು ಪುತ್ತೂರು- ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರಕ್ಕೆ ಅಶೋಕ್ ರೈಗಳು ಚಾಲನೆ ನೀಡಿದ್ದಾರೆ.

ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇಂದು ಅಶೋಕ್ ರೈಗಳು ಚಾಲನೆ ನೀಡಿದ್ದಾರೆ.

