Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸಿಪಿಎಂ ಕಾರ್ಯಕರ್ತರ ದಾಳಿಯಿಂದ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್​ ರವರನ್ನು ರಾಜ್ಯ ಸಭೆಗೆ ನಾಮಕರಣ ನೇಮಕ ಮಾಡಲಾಗಿದೆ.
ಕೇರಳದ ಹಿರಿಯ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಸಿ ಸದಾನಂದನ್ ಮಾಸ್ಟರ್, ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. 1994ರಲ್ಲಿ ಕೇರಳದ ಪೆರಿಂಚೇರಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರಿಂದ ನಡೆದ ರಾಜಕೀಯ ಹಿಂಸಾಚಾರದಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು .

Out Look Fashion


2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು, ಯುವಶಕ್ತಿಯ ಸಬಲೀಕರಣಕ್ಕೆ ತಮ್ಮ ಬದ್ಧತೆಗೆ ಹೆಸರಾಗಿದ್ದಾರೆ. ಪಿಎಂ ಮೋದಿ ಅವರು, “ಸದಾನಂದನ್ ಮಾಸ್ಟರ್ ಅವರ ಜೀವನವು ಧೈರ್ಯ ಮತ್ತು ಅನ್ಯಾಯದ ವಿರುದ್ಧ ಬಗ್ಗದಿರುವ ಸ್ಫೂರ್ತಿಯ ಸಂಕೇತವಾಗಿದೆ. ಅವರ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರ ಕೊಡುಗೆಗಳು ಶ್ಲಾಘನೀಯ” ಎಂದು ಈ ಹಿಂದೆ ಶ್ಲಾಘಿಸಿದ್ದರು.ಇದೀಗ ಸದಾನಂದ ಮಾಸ್ಟರ್ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Jaya Refrigeration and Air Condition