Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಸುರತ್ಕಲ್: ಮಂಗಳೂರು ನಗರದ ಸುರತ್ಕಲ್‌ನಲ್ಲಿರುವ ಎಂಆರ್‌ಪಿಎಲ್ ನ OM&S (ಆಪರೇಷನ್ಸ್‌ ಆಂಡ್ ಮೆಯಿಂಟೆನೆನ್ಸ್) ಘಟಕದ ಶೇಖರಣಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ H2S (ಹೈಡೋಜನ್ ಸಡ್) ಗ್ಯಾಸ್‌ ಸೋರಿಕೆ ಸಂಭವಿಸಿದ ಘಟನೆ ನಡೆದಿದೆ. ಸೋರಿಕೆಯ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಾಗೂ ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Out Look Fashion


ಇಬ್ಬರೂ ಸಿಬ್ಬಂದಿ ತಮ್ಮ ಎಂದಿನ ಕರ್ತವ್ಯದ ಭಾಗವಾಗಿ ಟ್ಯಾಂಕ್‌ ಪ್ಲಾಟ್‌ಫಾರ್ಮ್ ಮೇಲೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಸಣ್ಣ ಪ್ರಮಾಣದಲ್ಲಿ ಹೈಡೋಜನ್‌ ಸಿಡ್‌ (H2S) ಅನಿಲ ಸೋರಿಕೆಯಾಗಿರಬಹುದೆಂದು ಶಂಕಿಸಲಾಗಿದೆ. ಮುಖಗವಸು (ಮಾಸ್ಕ್) ಧರಿಸಿದ್ದರೂ, ವಿಷಕಾರಿ ಅನಿಲವನ್ನು ಸೇವಿಸಿದ ಪರಿಣಾಮ ಇಬ್ಬರೂ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅವರನ್ನು ರಕ್ಷಿಸಲು ತೆರಳಿದ್ದ ಗದಗ್ ಮೂಲದ ವಿನಾಯಕ್ ಎಂಬ ಇನ್ನೊಬ್ಬ ಸಿಬ್ಬಂದಿ ಕೂಡ ಅಸ್ವಸ್ಥಗೊಂಡು ಗಾಯಗೊಂಡಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದೀಪ್ ಚಂದ್ರ ಮತ್ತು ಬಿಜಿಲ್ ಪ್ರಸಾದ್‌ ಅವರನ್ನು ತಕ್ಷಣವೇ ನಗರದ ಶ್ರೀನಿವಾಸ್‌ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ

Jaya Refrigeration and Air Condition