Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಕ್ಕೂ
ಅಧಿಕ ಶವಗಳನ್ನು ಹೂತು ಹಾಕಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಕಾರ್ಮಿಕ ಜು.11 ರಂದು ತಮ್ಮ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ.

Out Look Fashion
Screenshot


ಕೃತ್ಯ ಎಸಗಿರುವ ಕುರಿತು ಸಾಕ್ಷಿ ಸಮೇತವಾಗಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತಿದ್ದಾನೆ.
ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಜುಲೈ 4 ರಂದು ನ್ಯಾಯವಾದಿಗಳಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್‌.ದೇಶಪಾಂಡೆ ಅವರ ಮೂಲಕ ದೂರು ನೀಡಿದ್ದ.

Jaya Refrigeration and Air Condition

ಈ ವ್ಯಕ್ತಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮುಂದೆ ಹೇಳಿಕೆ ನೀಡುತ್ತಿದ್ದಾನೆ.
ಇನ್ನೋವಾ ಕಾರಿನಲ್ಲಿ ಸಂಪೂರ್ಣ ಮುಸುಕುದಾರಿಯಾಗಿ ನ್ಯಾಯಾಲಯಕ್ಕೆ ವಕೀಲರೊಂದಿಗೆ ಜು.11 ರಂದು ಸಂಜೆ 4.30 ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.