



ಪುತ್ತೂರು: ಪುತ್ತೂರು ಬಿಜೆಪಿ ವತಿಯಿಂದ ಜುಲೈ 14ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಮರಳು ಕೆಂಪು ಕಲ್ಲು ಕೊರತೆಯ ವಿರುದ್ಧ ಜನಕ್ರೋಶ ಸಭೆ ಪುತ್ತೂರಿನಲ್ಲಿ ನಡೆಯಲಿದೆ.


ಈ ಜನಕ್ರೋಶ ಸಭೆಯ ಪೂರ್ವಭಾವಿ ಸಭೆಯು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲರ ಉಪಸ್ಥಿತಿಯಲ್ಲಿ
ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು.


ಈ ಸಭೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸ್ಸನ್ನ ಮಾರ್ತ, ನಾಗೇಶ್ ಕೆಮ್ಮಾಯಿ, ಸಜಾ ರಾಧಾಕೃಷ್ಣ ಆಳ್ವ, ಅನಿಲ್ ತೆಂಕಿಲ, ಉಮೇಶ್ ಕೊಡಿಬೈಲು, ಮತ್ತು ಅರ್ಯಾಪು ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
