



ಸುಳ್ಯ : ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕುಟ್ರುಪ್ಪಾಡಿ ಮಹಾ ಶಕ್ತಿ ಕೇಂದ್ರದ ಬೆಳಂದೂರು ಶಕ್ತಿ ಕೇಂದ್ರದ ಬೂತ್ ಸಮಿತಿ- 72 ರ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣ ಭಟ್. ಎನ್ ಮತ್ತು ಜ್ಯೋತಿ ಭಟ್ ದಂಪತಿಗಳಿಗೆ ಅವರ ನಿವಾಸದಲ್ಲಿ ಗುರು ಪೂರ್ಣಿಮ ಉತ್ಸವದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿ 72 ರ ಅಧ್ಯಕ್ಷರಾದ ನಿರ್ಮಲಾಕೇಶವ ಗೌಡ ಅಮೈ,ಕಾರ್ಯದರ್ಶಿ ಅನಿಲ್ ಕಂಡಿಗ ,ಪ್ರಮುಖರಾದ ಆನಂದ ಕೂಂಕ್ಯ, ರಕ್ಷಿತ್ ಕೂಂಕ್ಯ, ಚೇತನ್ ಕೊಯಕ್ಕುಡೆ,ನವೀನ್ ಕೊಯಕ್ಕುಡೆ,ಶ್ರವಣ್ ಕೊಯಕ್ಕುಡೆ,ಯಜ್ಞೇಶ್ ಕೊಡೆಂಕಿರಿ,ಸಚಿನ್ ಸೌತೆಮಾರು,ಅಕ್ಷಯ್ ಬರೆಪ್ಪಾಡಿ ಉಪಸ್ಥಿತರಿದ್ದರು.ನಿರ್ಮಲಾಕೇಶವ ಗೌಡ ಅಮೈ ಸ್ವಾಗತಿಸಿ, ಅನಿಲ್ ಕಂಡಿಗ ವಂದಿಸಿದರು.

