



ಸುಳ್ಯ : ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ , ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಪಾಲ್ತಾಡಿ ಬೂತ್ ಸಮಿತಿ 70ರ ವತಿಯಿಂದ *ಗುರುಪೂರ್ಣಿಮೆ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ನಡೆಯಿತು


ಪಾಲ್ತಾಡಿ ಗ್ರಾಮದ ಬ0ಬಿಲ ನಿವಾಸಿ ಶ್ರೀಮತಿ ಜಾನಕಿ ಇವರು ಓರ್ವ ಆದರ್ಶ ಶಿಕ್ಷಕಿ ಯಾಗಿದ್ದು ಅಂಕತಡ್ಕ ಪ್ರಾಥಮಿಕ ಶಾಲೆ ಪ್ರಸ್ತುತ ಪೆರ್ಲ0ಪಾಡಿ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಗುರುಪೂರ್ಣಿಮೆ ಪ್ರಯುಕ್ತ ಅವರ ಮನೆಯಲ್ಲಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಾದ ಹಾಗೂ ಮಾಜಿ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ. ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಅನ್ನಪೂರ್ಣ ಪ್ರಸಾದ್ ಬೈಲಾಡಿ, ಬೂತ್ ಸಮಿತಿ ಅಧ್ಯಕ್ಷ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಪಂಚಾಯತ್ ಅಧ್ಯಕ್ಷರು ಸುಂದರಿ ಬಿ ಯಸ್, ಸದಸ್ಯರಾದ ಹರಿಕಲಾ,ವಿನೋದಾ ರೈ, ಭರತ್ ರೈ, ಸುರೇಶ್ ದೋಳ ಹಾಗೂ ಮನೆ ಮಂದಿ ಉಪಸ್ಥಿತರಿದ್ದರು.
