



ಪುತ್ತೂರು: ಗುರುಪೂರ್ಣಿಮೆಯ ನಿಮಿತ್ತ ಪುತ್ತೂರು ಬಿಜೆಪಿ ವತಿಯಿಂದ ನಿವೃತ್ತ ಶಿಕ್ಷಕ ವೇಣುಗೋಪಾಲ ಶೆಟ್ಟಿ ಮರುವಾಳರವರ ಮನೆಗೆ ಭೇಟಿ ನೀಡಿ ಗೌರವ ಸಮರ್ಪಣೆ ಮೂಲಕ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಗೈದ ನಿವೃತ್ತ ಶಿಕ್ಷಕ ವೇಣುಗೋಪಾಲ ಶೆಟ್ಟಿ ಶುಭಹಾರೈಕೆಗಳೊಂದಿಗೆ ಆಶೀರ್ವದಿಸಿದರು.


ಕಾರ್ಯಕ್ರಮದಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ ಬೂತ್ ಕಾರ್ಯದರ್ಶಿ ರಾಜೇಶ್ ಹೊಯ್ಕೆ, ಕುಳ ಶಕ್ತಿ ಕೇಂದ್ರ ಪ್ರಮುಖ ಪ್ರಶಾಂತ್ ಶೆಟ್ಟಿ ಬರೆ, ಬೂತ್ ಪದಾಧಿಕಾರಿಗಳಾದ ದಕ್ಷಿತ್ ಕೆದಗೆದಡಿ ಮತ್ತು ದಿಲೀಪ್ ಕೊಪ್ಪಳ ಉಪಸ್ಥಿತರಿದ್ದರು.

