Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಶಿರ್ವ : ಮಾನಸಿಕ ಅಸ್ವಸ್ಥತೆ ಹಾಗೂ ಕುಡಿತದ ಚಟದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕು ಕಳತ್ತೂರು ಗ್ರಾಮದ ಪಾದೂರು ಚಂದ್ರನಗರದಲ್ಲಿ ನಡೆದಿದೆ.

Out Look Fashion

ಮೃತರನ್ನು ಮಟ್ಟಾರು ನಿವಾಸಿ ದೇಶ್ ರಾಜ್ ಬಾಬು (45) ಎಂದು ಗುರುತಿಸಲಾಗಿದೆ.

Jaya Refrigeration and Air Condition

ದೇಶ್ ರಾಜ್ ಬಾಬು ಅವರು ಕಳತ್ತೂರು ಗ್ರಾಮದ ಪಾದೂರು ಚಂದ್ರನಗರದಲ್ಲಿ ಉಮರಬ್ಬ ಎಂಬುವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದರು. ಅವರು ವಿಪರೀತ ಕುಡಿತದ ಚಟ ಹೊಂದಿದ್ದು, ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕುಡಿತದ ಚಟ, ಮಾನಸಿಕ ಅಸ್ವಸ್ಥತೆ ಅಥವಾ ಇತರ ಯಾವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಮಾಹಿತಿ ತಿಳಿದು ಶಿರ್ವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.