Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ರವರು ಬೂತ್ ಮಟ್ಟದ ಪ್ರವಾಸ ಕಾರ್ಯಕ್ರಮದ ಸಲುವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಮಹಾಶಕ್ತಿ ಕೇಂದ್ರದಲ್ಲಿ ಪ್ರವಾಸ ಕೈಗೊಂಡರು. ವಿಟ್ಲ ಮಹಾಶಕ್ತಿ ಕೇಂದ್ರದ 17 ಬೂತ್ ಗಳ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ಸಂಘಟನಾತ್ಮಕ ಚಟುವಟಿಕೆಗೆಗಳ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷ ಪುತ್ತೂರು ಮಂಡಲ ಪ್ರಭಾರಿ ಸುನೀಲ್ ಆಳ್ವ , ಪ್ರಸನ್ನ ಮಾರ್ತ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು , ಮಾಜಿ ಶಾಸಕ ಸಂಜೀವ ಮಠಂದೂರು , ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು , ಪ್ರಶಾಂತ್ ನೆಕ್ಕಿಲಾಡಿ , ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಶ್ರೀ ಕೃಷ್ಣ , ಪುರುಷೋತ್ತಮ ಮುಂಗ್ಲಿಮನೆ ಸೇರಿದಂತೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ , ಕಾರ್ಯದರ್ಶಿ , ಶಕ್ತಿಕೇಂದ್ರ ಪ್ರಮುಖರು , ಪಕ್ಷದ ಪದಾಧಿಕಾರಿಗಳು , ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Out Look Fashion