Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಚಾಮರಾಜನಗರ: ಕಾವೇರಿ ವನ್ಯಧಾಮದಲ್ಲಿ (Cauvery Wildlife Sanctuary) ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ವಸ್ತುಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ. ಘಟನಾ ಸ್ಥಳದಲ್ಲಿ ಹೊಸ ಚಪ್ಪಲಿ ಕೂಡ ಸಿಕ್ಕಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದಕ್ಕೆ ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Out Look Fashion

ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanur) ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ (Encounter) ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ನಾಂದಿ ಹಾಡಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಅರಣ್ಯ ಇಲಾಖೆ ಮಾಡಿದ್ದು ತಪ್ಪು ಎಂದರೆ, ಅರಣ್ಯಾಧಿಕಾರಿಗಳು ಆತ್ಮರಕ್ಷಣೆಗಾಗಿ ಶೂಟೌಟ್ ಮಾಡಿದ್ದು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಜಪ್ತಿ ಮಾಡಿದ ವಸ್ತುಗಳು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳದಲ್ಲಿ ಸಿಕ್ಕ 2 ಚೀಲಗಳಲ್ಲಿ ಮಾಂಸ, ಬಂದೂಕು, ಚಪ್ಪಲಿಗಳು ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಾಡಿಗೆ ಹೋದವರು ಹೊಸ ಚಪ್ಪಲಿ ತಗೊಂಡು ಹೋಗಿದ್ರಾ? ಸ್ಟಿಕ್ಕರ್ ಕೂಡ ಕಳಚದ, ಕಾಲಿಗೆ ಧರಿಸದ ಹೊಸ ಚಪ್ಪಲಿ ಸಿಕ್ಕಿದೆ. ಸ್ವಲ್ಪವೂ ಕೊಳೆಯಾಗದ ಚಪ್ಪಲಿಗಳು ಹಾಕಿಕೊಂಡು ಹೋಗಿದ್ರಾ ಎಂಬ ಅನುಮಾನ ಶುರುವಾಗಿದೆ. ಅಥವಾ ಅರಣ್ಯಾಧಿಕಾರಿಗಳ ಒಂದು ತಪ್ಪು ಮುಚ್ಚಲು ಹೋಗಿ ಮತ್ತೊಂದು ತಪ್ಪು ಎಸಗಿದ್ರಾ? ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

Jaya Refrigeration and Air Condition

ಇನ್ನು, ಹೊಸ ಚಪ್ಪಲಿ ಸಿಕ್ಕ ವಿಚಾರವಾದ ಬಗ್ಗೆಯೂ ಎಸಿಎಫ್ ಪ್ರತಿಕ್ರಿಯ ಕೊಟ್ಟಿದ್ದಾರೆ. ನಮ್ಮ ಸಿಬ್ಬಂದಿ ಅಲ್ಲಿಗೆ ಹೊಸ ಚಪ್ಪಲಿ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ. ಕಿತ್ತೋದ್ರೆ ಇರಲಿ ಅಂತಾ ತಂದು ಇಟ್ಟುಕೊಂಡಿರಬಹುದು. ಬ್ಯಾಗ್‌ನಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು ಎಂದು ಮರಿಸ್ವಾಮಿ ಹೇಳಿದ್ದಾರೆ.