



ದಕ್ಷಿಣ ಕನ್ನಡ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಳಿಯೂರು ಗ್ರಾಮದ ಕರ್ವೇಲು ಬಳಿ 110 ಕೆವಿ ವಿದ್ಯುತ್ ಗೋಪುರವನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರಿಸುವ ತುರ್ತು ಕಾಮಗಾರಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕೈಗೆತ್ತಿಕೊಂಡಿದೆ.


ಈ ಹಿನ್ನೆಲೆಯಲ್ಲಿ ಕರಾಯ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಆಗಸ್ಟ್ 1, ಶನಿವಾರ ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ನಿಲುಗಡೆ ಇರಲಿದೆ.

ಈ ಅವಧಿಯಲ್ಲಿ ಕಾರಂದೂರು, ತೆಕ್ಕಾರು, ಮೂರುಗೋಳಿ, ಕುದ್ರಡ್ಕ, ಪಿಲಿಗೂಡು, ಮುಗೇರಡ್ಕ, ಬಂದಾರು, ಪದ್ಮುಂಜ, ಕಲ್ಲೇರಿ ಟೌನ್, ಅಂಡೆತಡ್ಕ, ಕಕ್ಕೆಪದವು, ಉಪ್ಪಿನಂಗಡಿ ಟೌನ್, ಪಾಂಡವರಕಲ್ಲು ಹಾಗೂ ಕೆಮ್ಮಾರು ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಅಗತ್ಯ ಕಾಮಗಾರಿಗೆ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.
