Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಮಂಗಳೂರು: ತಿಂಗಳಿಗೆ ಕೇವಲ 1,000 ರೂಪಾಯಿ ಕಟ್ಟಿ, ತಿಂಗಳಿಗೊಂದು ಫ್ಲ್ಯಾಟ್, ದುಬಾರಿ ಕಾರು, ಚಿನ್ನಾಭರಣ ಹಾಗೂ ಐಷಾರಾಮಿ ಬಹುಮಾನಗಳನ್ನು ಗೆಲ್ಲಿರಿ…! ಇಂತಹ ಆಮಿಷ ಒಡ್ಡಿ ರಾಜ್ಯದ ಪ್ರಮುಖ ನಗರಗಳಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಸಂಗ್ರಹಿಸುತ್ತಿರುವ ಬೃಹತ್ ‘ಸ್ಕೀಮ್’ ದಂಧೆಬಯಲಿಗೆ ಬಂದಿದೆ.

Out Look Fashion

ಕಳೆದ ಒಂದು ವರ್ಷದಲ್ಲೇ ಈ ದಂಧೆಕೋರರು 500 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿದ್ದು, ಈಗ ಲಕ್ಷಾಂತರ ಜನರಿಗೆ ವಂಚಿಸಿ ಬಾಗಿಲು ಮುಚ್ಚಲು ಸಿದ್ಧತೆ ನಡೆಸಿರುವುದು ಆತಂಕ ಮೂಡಿಸಿದೆ. ಬೆಂಗಳೂರು, ಮಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಕೇಂದ್ರವಾಗಿಸಿಕೊಂಡು ಈ ದಂಧೆಕೋರರು ಸಕ್ರಿಯರಾಗಿದ್ದಾರೆ.

Jaya Refrigeration and Air Condition

ಮಧ್ಯಮ ವರ್ಗವೇ ಟಾರ್ಗೆಟ್

ದಿನಗೂಲಿ ನೌಕರರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದ ಜನರನ್ನು ಈ ಜಾಲ ಪ್ರಮುಖವಾಗಿ ಗುರಿಮಾಡಿಕೊಂಡಿದೆ. ಜನರನ್ನು ಸೆಳೆಯಲು ಸಿನಿಮಾ ರಂಗದ ಪ್ರಸಿದ್ದ ಸೆಲೆಬ್ರಿಟಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ತಿಂಗಳಿಗೆ 1 ರೂ. ಲಕ್ಷದಂತೆ 12 ಕಂತು ಕಟ್ಟಿದರೆ, 15ನೇ ತಿಂಗಳಿಗೆ 15 ಲಕ್ಷ ರೂ. ನೀಡುವುದಾಗಿ
ನಂಬಿಸುವ ಅತ್ಯಂತ ದುಬಾರಿ ಸ್ಕೀಮ್ ಗಳೂ ಮಾರುಕಟ್ಟೆಯಲ್ಲಿವೆ. ಹಣ ಹೂಡಿಕೆ ಮಾಡಿದ ಸಾರ್ವಜನಿಕರು ಈಗ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ. ಪ್ರಸ್ತುತ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌ಬಿಐ ನಿಯಮಗಳು ಗಾಳಿಗೆ

ಯಾವುದೇ ಹಣಕಾಸಿನ ಸ್ಕೀಮ್ ಆರಂಭಿಸಬೇಕಾದರೆ ನಿರ್ದಿಷ್ಟ ಎಸ್‌ಒಪಿ ಇರಬೇಕು. ಆದರೆ, ಯಾವುದೇ ಅನುಮತಿಯೂ ಇಲ್ಲದೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದ್ದರೂ ರಾಜ್ಯದ ಗೃಹ, ಕಂದಾಯ, ಐಟಿ ಇಲಾಖೆ ಹಾಗೂ ಜಿಎಸ್‌ಟಿ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಮಂಗಳೂರಿನಲ್ಲಿ ಈಗಾಗಲೇ ಕೆಲವು ಸ್ಕೀಮ್ ಮಾಲೀಕರು ಕಚೇರಿ ಮುಚ್ಚಿ ವಿದೇಶಕ್ಕೆ ಪರಾರಿಯಾಗಿದ್ದಾರೆ.

ಖಾಕಿ ಕೈಕಟ್ಟುವ ಯತ್ನ

ಈ ದಂಧೆಕೋರರು ಕಾನೂನಿನ ರಂಧ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಸ್ಥೆಯ ವಿರುದ್ಧ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಒಂದು ವೇಳೆ ಉಡುಪಿ ಪೊಲೀಸರು ವಿಚಾರಣೆಗೆ ಕರೆದರೆ, “ಪೊಲೀಸರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಸಕ್ರಮ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ,” ಎಂದು ನ್ಯಾಯಾಲಯಗಳ ಮೆಟ್ಟಿಲೇರಿ, ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸುವ ಕುತಂತ್ರ ನಡೆಸುತ್ತಿದ್ದಾರೆ.

ಹೇಗೆ ನಡೆಯುತ್ತೆ ಮಾಫಿಯಾ?

ಒಂದೊಂದು ಸ್ಕೀಮ್ ಸಂಸ್ಥೆಯು ತಿಂಗಳಿಗೆ 1000 ರೂ. ನಂತೆ ಸುಮಾರು 40 ರಿಂದ 50 ಸಾವಿರ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುತ್ತದೆ. ಬಾಗಿಲು ಇದರಿಂದ ಪ್ರತಿ ತಿಂಗಳು 4ರಿಂದ 5 ಕೋಟಿ ರೂ. ಹಣ ನೇರವಾಗಿ ಸಂಸ್ಥೆಯ ಕೈ ಸೇರುತ್ತದೆ. ಆರಂಭದ ಕೆಲವು ತಿಂಗಳುಗಳಲ್ಲಿ ಕೆಲವರಿಗೆ ಸಣ್ಣಪುಟ್ಟ ಬಹುಮಾನಗಳನ್ನು ನೀಡಿ ಜನರ ನಂಬಿಕೆ ಗಳಿಸಲಾಗುತ್ತದೆ. ಶೇ.30-40ರಷ್ಟು ಕಂತುಗಳು ಮುಗಿಯುತ್ತಿದ್ದಂತೆ, ವಿಜೇತರಿಗೆ ಫ್ಲ್ಯಾಟ್ ಆಗಲಿ, ಕಾರಾಗಲಿ ಅಥವಾ ಚಿನ್ನವಾಗಲಿ ಸಿಗುವುದಿಲ್ಲ. ಲಕ್ಷಾಂತರ ರೂಪಾಯಿ ಸಂಗ್ರಹಿಸಿದ ಮಾಲೀಕರು ಕೊನೆಯ ಹಂತದಲ್ಲಿ ಕಚೇರಿಗೆ ಬಾಗಿಲು ಹಾಕಿ ಪರಾರಿಯಾಗುತ್ತಿದ್ದಾರೆ. ಚೈನ್ ಲಿಂಕ್ ಮಾದರಿಯ ಈ ಸ್ಕೀಮ್‌ಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಅಡ್ಡೆಸರ್ (ಏಜೆಂಟ್ )ಗೆ ಹಣ, ಚಿನ್ನದುಂಗುರ, ಸ್ಮಾರ್ಟ್ ಫೋನ್, ವಿದೇಶ ಪ್ರವಾಸ, ಕಾರು ಆಫರ್ ನೀಡಲಾಗುತ್ತಿದೆ.

ಪ್ರಮುಖ ಜಿಲ್ಲೆಗಳಲ್ಲಿನ ಸಕ್ರಿಯ ಸ್ಕೀಮ್‌ ಸಂಸ್ಥೆಗಳ ಸ್ಥಿತಿಗತಿ

  • ಬೆಂಗಳೂರು: 12
  • ಮಂಗಳೂರು: 18
  • ಚಿಕ್ಕಮಗಳೂರು: 08
  • ಶಿವಮೊಗ್ಗ: 07
  • ಉಡುಪಿ: 06
  • ಉತ್ತರ ಕನ್ನಡ: 04
  • ಒಟ್ಟು ಮೊತ್ತ: ಬರೋಬ್ಬರಿ 500 ಕೋಟಿಗೂ ಅಧಿಕ ವ್ಯವಹಾರ!

ನಕಲಿ ಸ್ಕೀಮ್‌ಗಳ ಕುರಿತು ಇರಲಿ ಎಚ್ಚರ!

  • ಮಾಸಿಕ ಕೇವಲ 1,000 ರೂ. ಕಟ್ಟಿ ಲಕ್ಷಾಂತರ ಮೌಲ್ಯದ ಫ್ಲ್ಯಾಟ್, ಕಾರು ಗೆಲ್ಲಬಹುದೆಂಬ ಆಸೆಗೆ ಬೀಳಬೇಡಿ.
  • ಆರ್‌ಬಿಐ ಅಥವಾ ಸರ್ಕಾರಿ ನೋಂದಣಿ ಇಲ್ಲದ ಯಾವುದೇ ಖಾಸಗಿ ಸ್ಕಿಮ್‌ ಗಳಿಗೆ ಹಣ ಕಟ್ಟಬೇಡಿ.
  • ನೆನಪಿಡಿ, ಸೆಲೆಬ್ರಿಟಿಗಳು ಪ್ರಚಾರ ಮಾಡಿದ ತಕ್ಷಣವೇ ಯಾವುದೇ ಸ್ಕೀಮ್‌ಗಳು ಸಕ್ರಮವಾಗದು.

“ಈ ಸ್ಕೀಮ್‌ಗಳ ವ್ಯವಹಾರಕ್ಕೆ ರಾಜ್ಯದಲ್ಲಿ ಯಾವುದೇ ಎಸ್‌ಒಪಿ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುವ ಕೆಲಸವಾಗಬೇಕಿದೆ.”
-ಸುಧೀರ್ ಕುಮಾ‌ರ್ ರೆಡ್ಡಿ ಪೊಲೀಸ್ ಕಮಿಷನ‌ರ್, ಮಂಗಳೂರು ನಗರ