Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಜೊತೆಗೆ ಮನೆಯ ಹೊರಾಂಡದಲ್ಲಿದ್ದ ₹2,900 ನಗದು ಕಳವು ಮಾಡಿದ ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Out Look Fashion

ಶಿಬಾಜೆ ನಿವಾಸಿ ಎಲಿಯಮ್ಮ ತೋಮಸ್ (60) ನೀಡಿದ ದೂರಿನ ಪ್ರಕಾರ, ಜುಲೈ 10ರಂದು ರಾತ್ರಿ ಮನೋಜ್ ಎನ್.ಕೆ. ಹಾಗೂ ರಾಜು ಎಂಬವರು ಮನೆ ಬಳಿ ಬಂದು ಹಂಚಿಗೆ ಕಲ್ಲು ತೂರಿ, ಅವಾಚ್ಯವಾಗಿ ಬೈದು, ಅವರ ಮಗನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಆರೋಪಿಗಳಲ್ಲಿ ಮನೋಜ್ ಮನೆಯ ಹೊರಾಂಡದಲ್ಲಿದ್ದ ₹2,900 ನಗದು ತೆಗೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Jaya Refrigeration and Air Condition

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 50/2026, ಬಿಎನ್‌ಎಸ್-2023ರ ಕಲಂ 329(3) ಹಾಗೂ 3(5)ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.