Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಪುತ್ತೂರು: ಬೊಳುವಾರು–ಹಾರಾಡಿ ರಸ್ತೆಯ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ನಿಧಾನಗತಿಯ ಕಾಮಗಾರಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಂಗ್ಯ ವ್ಯಕ್ತವಾಗುತ್ತಿದೆ.

Out Look Fashion

ರಸ್ತೆಯನ್ನು ಮೊದಲು ನಿರ್ಮಿಸಬೇಕಿದ್ದ ಕಾಮಗಾರಿಯಲ್ಲಿ ನಂತರ ಮೋರಿ ನಿರ್ಮಾಣದ ಕೆಲಸ ಆರಂಭಿಸಿರುವುದು ವಿಳಂಬಕ್ಕೆ ಕಾರಣವಾಗಿದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ. ಕಾಮಗಾರಿ ಇನ್ನೂ ಶೇ.50ರಷ್ಟೂ ಪೂರ್ಣಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Jaya Refrigeration and Air Condition

ಕಳೆದ ಜೂನ್ 18ರಿಂದ ಜುಲೈ 18ರವರೆಗೆ ಹಾರಾಡಿ ರೈಲ್ವೆ ಸೇತುವೆಯ ಅಡಿಭಾಗದಲ್ಲಿ ಕಾಮಗಾರಿ ನಡೆಸಲು ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದ ವಾಹನ ಸವಾರರು ಸುಮಾರು 4 ಕಿಲೋಮೀಟರ್ ಹೆಚ್ಚುವರಿ ದೂರ ಕ್ರಮಿಸಿ ಪುತ್ತೂರಿಗೆ ಸಂಚರಿಸಬೇಕಾದ ಪರಿಸ್ಥಿತಿ ಎದುರಿಸಿದ್ದರು.

ಈಗ ಕಾಮಗಾರಿ ಭಾಗದಲ್ಲಿ ಕಾಂಕ್ರೀಟ್ ರಸ್ತೆಯ ಮಧ್ಯೆ ಮಣ್ಣು ಹಾಕಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ಮಾರ್ಗವು ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಒಂದೇ ವಾಹನ ಸಂಚರಿಸುವಷ್ಟು ಮಾತ್ರ ಜಾಗ ಇರುವುದರಿಂದ ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುವ ವಾಹನಗಳು ಹಾಗೂ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುವ ವಾಹನಗಳು ಸರದಿ ಸಾಲಿನಲ್ಲಿ ಸುಮಾರು 15 ನಿಮಿಷಗಳವರೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದಿನನಿತ್ಯ ಇದೇ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರು, “ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ? ಸುಗಮ ಸಂಚಾರ ಯಾವಾಗ ಸಾಧ್ಯವಾಗುತ್ತದೆ?” ಎಂದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸುತ್ತಿದ್ದಾರೆ.

ಕಾಮಗಾರಿ ಸ್ಥಳದಲ್ಲಿ ದಿನನಿತ್ಯ ಕೇವಲ 3 ರಿಂದ 4 ಮಂದಿ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಹಲವು ದಿನಗಳಿಂದ ಜೆಸಿಬಿ ಸೇರಿದಂತೆ ಭಾರೀ ಯಂತ್ರಗಳು ಸ್ಥಳದಲ್ಲೇ ನಿಷ್ಕ್ರಿಯವಾಗಿ ನಿಂತಿದ್ದು, ಕಾಮಗಾರಿಯ ವೇಗದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತುತ್ತಿದ್ದಾರೆ.

“ಒಂದು ಮೋರಿಯ ಕೆಲಸಕ್ಕೆ ಕೇವಲ ಮೂವರು ಕಾರ್ಮಿಕರನ್ನು ನಿಯೋಜಿಸಿದರೆ, ಈ ಕಾಮಗಾರಿ ಇನ್ನೂ ಎರಡು ತಿಂಗಳಾದರೂ ಮುಗಿಯುವುದಿಲ್ಲ” ಎಂದು ಸ್ಥಳೀಯರು ವ್ಯಂಗ್ಯ ವ್ಯಕ್ತಪಡಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅಪೂರ್ಣ ಕಾಮಗಾರಿಯಿಂದ , ಟ್ರಾಫಿಕ್ ಸಮಸ್ಯೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಮತ್ತು ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡಿ, ಹೆಚ್ಚುವರಿ ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಿ ಶೀಘ್ರದಲ್ಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಸಾರ್ವಜನಿಕರ ಆಗ್ರಹ ಏನೆಂದರೆ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಈ ಪ್ರಮುಖ ರಸ್ತೆಯಲ್ಲಿ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕೆ ತಕ್ಷಣವೇ ಅವಕಾಶ ಕಲ್ಪಿಸಬೇಕು.