Akshaya Sharadhotsava
Darbe Salon
Mahalingeshwara Car Air Condition
New Dot Dress Mart

ನಿನ್ನೆ ಬಿ.ಸಿ.ರೋಡ್‌ನಲ್ಲಿ ನಡೆದ ದಾರುಣ ಘಟನೆಯಲ್ಲಿ ಜೀವ ಕಳೆದುಕೊಂಡ ಯುವತಿ ಲಾವಣ್ಯ ಅವರ ನಿವಾಸಕ್ಕೆ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Out Look Fashion

ಈ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, “ನಿನ್ನೆವರೆಗೂ ನಗುನಗುತ್ತಿದ್ದ ಈ ಮನೆ ಇಂದು ದುಃಖದ ಮಡುವಾಗಿದೆ. ಈ ನೋವು ಕೇವಲ ಒಂದು ಕುಟುಂಬದದ್ದಲ್ಲ, ನಮ್ಮೆಲ್ಲರ ನೋವಾಗಿದೆ. ಅಮಾಯಕ ಯುವತಿಯ ಜೀವ ಕಸಿದ ಈ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗಬೇಕು. ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ” ಎಂದು ಪ್ರಾರ್ಥಿಸಿದರು.

Jaya Refrigeration and Air Condition

ಸ್ಥಳದಲ್ಲಿದ್ದ ಬಂಧು-ಬಳಗ ಹಾಗೂ ಸಾರ್ವಜನಿಕರು ಕೂಡ ಲಾವಣ್ಯ ಅವರಿಗೆ ಅಂತಿಮ ನಮನ ಸಲ್ಲಿಸಿ, ಕುಟುಂಬದ ದುಃಖದಲ್ಲಿ ಭಾಗಿಯಾದರು.