Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯೊಬ್ಬ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Out Look Fashion

ಪೊಲೀಸರ ಮಾಹಿತಿ ಪ್ರಕಾರ, ಕಡಬ ನೆಲ್ಯಾಡಿ ನಿವಾಸಿ ಗಣಪಯ್ಯ (69) ಅವರು ನೀಡಿದ ದೂರಿನಂತೆ, ಅವರ ಪುತ್ರ ಸೋಮಶೇಖರ್ ಹೆಚ್ (27) ಅವರು ಪ್ರತಿದಿನ ಮನೆಯವರೊಂದಿಗೆ ಗಲಾಟೆ ಮಾಡುತ್ತಿದ್ದರು. ಜುಲೈ 10ರ ಬೆಳಗಿನ ಜಾವ ಅವರು ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

Jaya Refrigeration and Air Condition

ಈ ವೇಳೆ ನೇಣಿಗೆ ಬಳಸಿದ್ದ ಹಗ್ಗ ತುಂಡಾಗಿ, ಅವರ ದೇಹವು ಕೆಳಗೆ ಬಿದ್ದಿದ್ದ ಗಾಜಿನ ಚೂರುಗಳ ಮೇಲೆ ಬಿದ್ದು ಮೃತಪಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 28/2026ರಡಿ, ಬಿಎನ್‌ಎಸ್‌ಎಸ್ ಕಲಂ 194ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.