Akshaya Sharadhotsava
Darbe Salon
Mahalingeshwara Car Air Condition
New Dot Dress Mart

ತಿರುವನಂತಪುರಂ: ವಯನಾಡಿನ (Wayanadu) ಮೆಪ್ಪಾಡಿಯಲ್ಲಿ ಭೀಕರ ಭೂಕುಸಿತ (Land Slide) ಸಂಭವಿಸಿದೆ. ನೀರಿನಂತೆ ಮಣ್ಣು ಹರಿದುಬಂದು ಅಪ್ಪಳಿಸಿದ ದೃಶ್ಯ ಸಮೀಪದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಟ್ಯಾಂಕರ್‌ವೊಂದು ಹಲವು ಜನರ ಜೀವ ಉಳಿಸಿರುವುದು ಕಂಡುಬಂದಿದೆ.

Out Look Fashion

ವಯನಾಡು ಜಿಲ್ಲೆಯ ಕಲ್ಲಾಡಿಯ (Kalladi) ಮೀನಾಕ್ಷಿ ಸೇತುವೆಯ ಬಳಿ ನಿರ್ಮಾಣ ಹಂತದಲ್ಲಿರುವ ಅನಾಕ್ಕಂಪೋಯಿಲ್-ಮೆಪ್ಪಾಡಿ (Meppadi) ಸುರಂಗ ಮಾರ್ಗ ಯೋಜನೆಯ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಈ ವೇಳೆ ಸೇತುವೆ ಮೇಲೆ ನಿಂತಿದ್ದ ಟ್ಯಾಂಕರ್ ಹರಿದು ಬಂದ ಮಣ್ಣಿನ ರಭಸವನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿದಿದ್ದು, ಹಲವರ ಪ್ರಾಣ ಉಳಿಸಿದೆ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Jaya Refrigeration and Air Condition

ತಮಿಳುನಾಡಿನ ಮಹಿಳೆ ಕೂಡಮ್ಮಾಳ್ ಹಾಗೂ ಅವರ ಪತಿ ಮೆಪ್ಪಾಡಿಗೆ ಹೋಗಲು ಬಸ್ಸಿಗಾಗಿ ಸೇತುವೆ ಬಳಿ ಕಾಯುತ್ತಾ ನಿಂತಿದ್ದರು. ಈ ವೇಳೆ ಮಣ್ಣು ಹರಿದುಬರುತ್ತಿರುವುದನ್ನು ಕಂಡು ದಿಕ್ಕಾಪಾಲಾಗಿ ಓಡಿ ಬಂದಿದ್ದಾರೆ. ಒಂದು ಕ್ಷಣ ಯಮ ಕಣ್ಮುಂದೆ ಬಂದು ಹೋದಂತಾಗಿದ್ದು, ಮಣ್ಣಿನಡಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ 6 ಮಂದಿಗಾಗಿ ಹುಡುಕಾಟ ಮುಂದುವರಿದಿದ್ದು, 9 ಜನ ಸೇಫ್ ಆಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಶ್ವಾನದಳದಿಂದ ತಪಾಸಣೆ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.